ಡೇಟಿಂಗ್ ಆ್ಯಪ್ ಮೂಲಕ ಆನ್ ಲೈನ್‌ ನಲ್ಲಿ ಸರ್ವಿಸ್ ನೀಡುವುದಾಗಿ ಗ್ರಾಹಕರಿಗೆ ವಂಚನೆ: ಆರೋಪಿ ಬಂಧನ.

ಮೈಸೂರು,ಜೂನ್,10,2022(www.justkannada.in): ಡೇಟಿಂಗ್ ಆ್ಯಪ್ ಮೂಲಕ ಆನ್ ಲೈನ್‌ನಲ್ಲಿ ಸರ್ವಿಸ್ ನೀಡುವುದಾಗಿ ಗ್ರಾಹಕರ ಬಳಿ 8 ಲಕ್ಷದವರೆಗೆ ಹಣ ಪಡೆದು ವಂಚಿಸಿದ್ದ ಆರೋಪಿಯನ್ನ ಮೈಸೂರು ಪೊಲೀಸರು ಬಂಧಿಸಿದ್ದಾರೆ.

LOCANTO ಡೇಟಿಂಗ್ ಎಂಬ ಆ್ಯಪ್ ಮೂಲಕ ಗ್ರಾಹಕರುಗಳಗೆ ಆ್ಯಡ್ ಗಳನ್ನು ಹಾಕಿ ಗ್ರಾಹಕರಿಗೆ ಸ್ವಾ ಸೇವೆ ನೀಡುವುದಾಗಿ ನಂಬಿಸಿ ಗ್ರಾಹಕರಿಂದ ಫೋನ್ ಪೇ ಮುಖಾಂತರ ವಿವಿಧ ಹಂತಗಳಲ್ಲಿ ಒಟ್ಟು 3000/-ರೂಗಳನ್ನು ಹಾಕಿಸಿಕೊಂಡು ಮೋಸ ಮಾಡಿದ್ದ ಬಗ್ಗೆ ನೀಡಿದ ದೂರಿನ ಮೇರೆಗೆ ಮೈಸೂರು ನಗರದ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದರು.

ತಕ್ಷಣ ಕಾರ್ಯ ಪ್ರವೃತ್ತರಾದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಆರೋಪಿಯನ್ನು 24 ಗಂಟೆಗಳಲ್ಲಿ ಬಂಧಿಸಿ ಅತನಿಂದ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಲ್ಯಾಪ್‌ ಟಾಪ್‌ ಹಾಗೂ 4 ಮೊಬೈಲ್‌ ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಲೋಕ್ಯಾಂಟೋ ಡೇಟಿಂಗ್ ಆ್ಯಪ್‌ ನಲ್ಲಿ ಆ್ಯಡ್ ಮೂಲಕ ಸುಂದರವಾದ ಹುಡುಗಿಯರ ಫೋಟೋ ಹಾಕಿ ಸಿಂಗಲ್ ಹುಡುಗಿಯರು ಇದ್ದಾರೆ ಮತ್ತು ಕಾಲೇಜ್ ಹುಡುಗಿಯರ ನಗ್ನ ವಿಡಿಯೋ ಕಾಲ್ ಸರ್ವಿಸ್ ಇದೆ ಹಾಗೂ ಹುಡುಗಿಯರೇ ನೇರವಾಗಿ ಮೀಟ್ ಮಾಡುತ್ತಾರೆ ಎಂಬುದಾಗಿ ಆ್ಯಡ್ ಹಾಕಿ ಕಸ್ಟಮರ್ ರವರಿಗೆ ಸರ್ವಿಸ್ ನೀಡುವ ಮೊದಲು 50% ಪಾವತಿಸ ಬೇಕೆಂದು ಕೇಳಿ ಆನ್‌ಲೈನ್ ಪೇಮೆಂಟ್ ಮೂಲಕ ತನ್ನ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದು. ಇದುವರೆವಿಗೆ ಸುಮಾರು 80-100 ಜನರಿಂದ ಅಂದಾಜು ಸುಮಾರು 8 ಲಕ್ಷದ ವರೆಗೆ ಹಣ ಪಡೆದು ವಂಚಿಸಿರುವ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.ganja peddlers arrested by mysore police

ಮೈಸೂರು ನಗರದ ಡಿ.ಸಿ.ಪಿ ಪ್ರದೀಪ್ ಗುಂಟಿ, ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎಸಿಪಿ ರವರಾದ. ಶಶಿಧರ್ ಎಂ.ಎನ್ ರವರ ಉಸ್ತುವಾರಿಯಲ್ಲಿ ಸೆನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜಯಕುಮಾರ್, ಎನ್, ಪಿ.ಎಸ್.ಐ. ಸಿದ್ದೇಶ್ ಮತ್ತು ಸಿಬ್ಬಂದಿಗಳು  ಈ ಪತ್ತೆ ಕಾರ್ಯ ಮಾಡಿದ್ದಾರೆ.

Key words: Consumers-cheat – online -services – dating app-arrest-mysore