ಮೈಸೂರು-ಬೆಂಗಳೂರು ನಡುವೆ 10 ಲೈನ್ ರಸ್ತೆ ನಿರ್ಮಾಣ:  ಇದರಿಂದ ಪ್ರಯಾಣದ ಅವಧಿ ಕಡಿಮೆಯಾಗಲಿದೆ- ಮಾಹಿತಿ ನೀಡಿದ ಸಂಸದ ಪ್ರತಾಪ್ ಸಿಂಹ…

ಮೈಸೂರು,ಫೆ,20,2020(www.justkannada.in): ಮೈಸೂರು-ಬೆಂಗಳೂರು ನಡುವೆ 10 ಲೈನ್ ರಸ್ತೆ ಮಾಡುತ್ತಿದ್ದೇವೆ. ಈ ಯೋಜನೆಯ ಒಟ್ಟು ಮೊತ್ತ 7400ಕೋಟಿಯಾಗಿದೆ. 6 ಲೈನ್ ರಸ್ತೆ ಎಕ್ಸ್‌ಪ್ರೆಸ್ ಹೈವೆ ಆಗಲಿದ್ದು, ಉಳಿದ ಎರಡು ಲೈನ್ ರಸ್ತೆ ಸರ್ವಿಸ್ ರಸ್ತೆ ಆಗಲಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮೈಸೂರು-ಬೆಂಗಳೂರು, ಮೈಸೂರು-ಕೊಡಗು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ  ಸಂಸದ ಪ್ರತಾಪ್‌ಸಿಂಹ, ಈಗ ಮೈಸೂರು ಬೆಂಗಳೂರು ನಡುವೆ 3 ಗಂಟೆ ಪ್ರಯಾಣ ಅವಧಿ ಇದೆ. 10 ಲೈನ್ ರಸ್ತೆ ನಿರ್ಮಾಣದಿಂದ ಈ ರಸ್ತೆಯಿಂದಾಗಿ ಪ್ರಯಾಣದ ಅವಧಿ 1.5 ಗಂಟೆ ಇಳಿಯಲಿದೆ. ಮೈಸೂರು ಬೆಂಗಳೂರು ನಡುವೆ 118 ಕಿಲೋಮೀಟರ್ ಮಾತ್ರ ಪ್ರಯಾಣ ಇರಲಿದೆ ಎಂದು ತಿಳಿಸಿದರು.

ಹಾಗೆಯೇ ಇದೆ ರೀತಿ ಮೈಸೂರು ಕೊಡಗು ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯಲಿದೆ. ಇಲ್ಲಿಯೂ ನಾಲ್ಕು ಲೈನ್ ರಸ್ತೆ ನಿರ್ಮಾಣವಾಗಲಿದೆ. 93 ಕಿಲೋಮೀಟರ್ ರಸ್ತೆಯನ್ನ 84 ರಸ್ತೆಗೆ ಇಳಿಸಿ ಕಾಮಗಾರಿ ನಡೆಯಲಿದೆ. ಮೈಸೂರು ಕೊಡಗು ಯೋಜನೆ 3120 ಕೋಟಿ ಇರಲಿದೆ. ಮೈಸೂರು ಕೊಡಗು ರಾಷ್ಟ್ರೀಯ ಹೆದ್ದಾರಿ ಮೈಸೂರು ನಗರದೊಳಗೆ ಹಾದು ಹೋಗೋಲ್ಲ. ಎರಡು ರಸ್ತೆಗಳಿಂದ ಸಮಯ ಹಾಗೂ ಪ್ರಯಾಣ ದೂರ ಕಡಿಮೆಯಾಗಲಿದ್ದು, ಮೈಸೂರು ಕೊಡಗು ಎರಡು ಅಭಿವೃದ್ಧಿ ಆಗಲಿದೆ. ಈ ಯೋಜನೆಗಳು ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಾಗಿದ್ದು, 2021ರ ಅಂತ್ಯದ ವೇಳೆಗೆ ಈ ಯೋಜನೆಗಳು ಸಂಪೂರ್ಣ ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದರು.

ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಆರೋಪಿಗಳಿಗೆ ಸ್ಟೇಷನ್ ಬೇಲ್ ನೀಡಿದ ಪ್ರಕರಣ ಕುರಿತು ಕಿಡಿ ಕಾರಿದ ಸಂಸದ ಪ್ರತಾಪ್ ಸಿಂಹ, ಇದು ಬೇಲ್ ಕೊಟ್ಟವರು ಮಾಡಿದ ದೊಡ್ಡ ಅನಾಹುತ. ನಮ್ಮ ದೇಶದ ಅನ್ನ ತಿಂದು ನಮ್ಮ ದೇಶದಲ್ಲಿ ಓದಿ ಬೇರೆ ದೇಶಕ್ಕೆ ಜೈ ಅನ್ನೋರನ್ನ ಇಷ್ಟು ಸುಲಭವಾಗಿ ಬಿಡೋಕಾಗುತ್ತಾ? ಯಾಕಾಗಿ ಸ್ಟೇಷನ್ ಬೇಲ್ ನೀಡಿದ್ದಾರೋ ನನಗು ಗೊತ್ತಿಲ್ಲ. ಆದ್ರೆ ದೇಶದ್ರೋಹ ಮಾಡಿದ ಆರೋಪಿಗಳನ್ನ ಇಷ್ಟು ಸುಲಭವಾಗಿ ಬಿಡೋದು ಸರಿಯಲ್ಲ. ನಮ್ಮ ಗೃಹಸಚಿವರು ಎಲ್ಲ ಸ್ಟೇಷನ್‌ ಗೂ ಪೋನ್ ಮಾಡೋಕೆ ಸಾಧ್ಯವಾಗಿರೋಲ್ಲ. ಈ ಪ್ರಕರಣದ ಬಗ್ಗೆ ಅವರು ಪರಿಶೀಲನೆ ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದರು.

Key words: Construction – 10 lane road- between -Mysore-Bangalore-MP-Pratap Simha