ಸಿಎಎ ವಿರೋಧಿಸಿ ‘ಗಾಂಧಿಗಿರಿ ಮಾದರಿ’ ಪ್ರತಿಭಟನೆ; ಮೈಸೂರಿನಲ್ಲಿ ಬಿಜೆಪಿ ಸಂಸದರಿಗೆ ಶುಭಕೋರಲು ಹೋಗಿ ವಾಪಸ್ ಆದ ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯರು….

Promotion

ಮೈಸೂರು,ಜ,1,2020(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ ಆರ್ ಸಿ ಕಾಯ್ದೆ ವಿರೋಧಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಸದಸ್ಯರು ಇಂದು ಬಿಜೆಪಿ ಸಂಸದರ ನಿವಾಸಕ್ಕೆ ಭೇಟಿ ನೀಡಿ ಗುಲಾಬಿ ಹೂ ನೀಡುವ ಮೂಲಕ ಗಾಂಧಿಗಿರಿ ಮಾದರಿಯಲ್ಲಿ ಪ್ರತಿಭಟನೆ ಮುಂದಾದರು.

ಅಂತೆಯೇ ಇಂದು ಮೈಸೂರಿನಲ್ಲಿ  ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ  ಕಚೇರಿಗೆ ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯರು ಭೇಟಿ ನೀಡಿ ಹೊಸವರ್ಷದ ಶುಭಾಶಯದ ಜೊತೆಗೆ ಸಿಎಎ ವಿಚಾರ ಲೋಕಸಭೆಯಲ್ಲಿ ಚರ್ಚೆ ಮಾಡಿ ಕಾಯ್ದೆ ಹಿಂಪಡೆಯಲು ಒತ್ತಾಯಿಸುವಂತೆ ಮನವಿ ಮಾಡಲು ತೆರಳಿದ್ದರು.

ಆದರೆ ಸಂಸದ ಪ್ರತಾಪ್ ಸಿಂಹ ಪ್ರವಾಸದಲ್ಲಿದ್ದು ಈ ಹಿನ್ನೆಲೆ ಕಚೇರಿ ಬಾಗಿಲು ಹಾಕಿತ್ತು. ಹೀಗಾಗಿ ಕಚೇರಿ ಮುಂದೆ ಬಿಳಿ ಗುಲಾಬಿ, ಶುಭಕೋರಿ ಮನವಿ ಪತ್ರವನ್ನ ಇಟ್ಟು ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯರ ತಂಡ ವಾಪಸ್ಸಾದರು. ಇನ್ನು ಮನವಿ ಪತ್ರವನ್ನ ಸಂಸದ ಪ್ರತಾಪ್ ಸಿಂಹ ಅವರಿಗೆ ಪೋಸ್ಟ್ ಅಥವಾ ಇ ಮೇಲ್ ಮೂಲಕ ರವಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಗಾಂಧಿಗಿರಿ ಮಾದರಿಯ ಪ್ರತಿಭಟನೆ ಕುರಿತು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾಹಿತಿ ನೀಡಿದ್ದರು. ಹೊಸವರ್ಷದ ದಿನ ರಾಜ್ಯ ಬಿಜೆಪಿ ಸಂಸದರ ನಿವಾಸಕ್ಕೆ ಭೇಟಿ ನೀಡಿ ಬಿಳಿ ಗುಲಾಬಿ ಹೂ ನೀಡುವ ಮೂಲಕ ಗಾಂಧಿಗಿರಿ ಮಾದರಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಡಾ.ಪುಷ್ಪ ಅಮರನಾಥ್ ತಿಳಿಸಿದ್ದರು.

key words:   Congress -Women Unit –member-visit- bjp mp- prathap simha-office-rose-wishes