ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡುತ್ತೇವೆ- ವಿಪಕ್ಷ ನಾಯಕ ಸಿದ್ಧರಾಮಯ್ಯ

ಬೆಂಗಳೂರು,ಮಾರ್ಚ್,8,2021(www.justkannada.in):  ಬಜೆಟ್ ಮಂಡನೆಗೆ ರಾಜ್ಯ ಸರ್ಕಾರಕ್ಕೆ ನೈತಿಕತೆ ಇಲ್ಲ. ರಾಜ್ಯ ಸರ್ಕಾರ ನೈತಿಕತೆಯನ್ನ ಕಳೆದುಕೊಂಡಿದೆ. ಹೀಗಾಗಿ ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದರು.jk

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ದೇವನಹಳ್ಳಿ ಬಳಿ ಹೌಸಿಂಗ್ ಯೋಜನೆಗೆ ಟೆಂಡರ್ ಆಗಿತ್ತು. ಉದ್ಯಮಿ ಆಲಂಪಾಷರಿಗೆ ಆಗಿತ್ತು. ನಂತರ ಅದನ್ನ ರದ್ದುಪಡಿಸಲಾಗಿತ್ತು. ಇದರ ಬಗ್ಗೆ ಆಲಂಪಾಷ ದೂರು ದಾಖಲಿಸಿದ್ದರು. ದೂರನ್ನ ಕ್ವಾಶ್ ಮಾಡೋಕೆ ಸಿಎಂ,ನಿರಾಣಿ ಹೋಗಿದ್ದರು. ಆದರೆ ಕೋರ್ಟ್ ಅದನ್ನ ರದ್ದುಪಡಿಸಿತ್ತು. ಹೀಗಾಗಿ ಸಿಎಂ,ನಿರಾಣಿಗೆ ಬಂಧನ ಆತಂಕ ಎದುರಾಗಿತ್ತು. ಇದನ್ನ ಪ್ರಶ್ನಿಸಿ ಸುಪ್ರೀಂಗೆ ಇವರು ಮೇಲ್ಮನವಿ ಹೋಗಿದ್ದರು. ಸುಪ್ರೀಂ ಸಿಎಂ ಅರೆಸ್ಟ್ ಮಾಡೋಕೆ ಆಗುತ್ತಾ ಎಂದಿತ್ತು. ಈಗ ಯಡಿಯೂರಪ್ಪ ಜಾಮೀನಿನ ಮೇಲೆ ಹೊರಗಿದ್ದಾರೆ. ಸಚಿವ ನಿರಾಣಿ ಕೂಡ‌ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದರು.

ಆರು ಸಚಿವರು ಕೋರ್ಟ್ ಗೆ ಅರ್ಜಿ‌ಹಾಕಿದ್ದಾರೆ. ಭೈರತಿ ‌ಬಸವರಾಜು,ನಾರಾಯಣಗೌಡ, ಸುಧಾಕರ್, ಎಸ್.ಟಿ.ಸೋಮಶೇಖರ್, ಅರೆಬೈಲು ಶಿವರಾಂ‌ಹೆಬ್ಬಾರ್ ಅರ್ಜಿ ಹಾಕಿದ್ದಾರೆ, ರಮೇಶ್ ಜಾರಕಿಹೊಳಿ ಸಿಡಿ ನಂತರ ಇವರಿಗೆ ಭಯ ಪ್ರಾರಂಭವಾಗಿದೆ. ಇವರು ಕೋರ್ಟ್ ಗೆ ಅರ್ಜಿ‌ ಹಾಕಿರೋದು ಯಾಕೆ. ಇವರಿಗೆ ಯಾವುದೋ ಭಯ ಇರಬೇಕಲ್ವೇ ಎಂದು ಪ್ರಶ್ನಿಸಿದರು.

ವರದಿ ಮಾಡದಂತೆ ಅಪೀಲು ಹೋಗಿದ್ದಾರೆ. ತಮ್ಮ ವಿರುದ್ದ ಅಕ್ಷೇಪಾರ್ಹ ಸುದ್ದಿ ಪ್ರಸಾರಕ್ಕೆ ತಡೆ ತಂದಿದ್ದಾರೆ. ಇದು ಮಾಧ್ಯಮಸ್ವಾತಮತ್ರದ ಹರಣವಾಗಿದೆ. ಸಿಡಿ ಸಿಕ್ಕಿದರೂ ಟೆಲಿಕಾಸ್ಟ್ ಮಾಡುವಂತಿಲ್ಲ. ಈಗ ಮಾಧ್ಯಮಗಳ ಸ್ವಾತಂತ್ರ್ಯಕ್ಕೂ ಅಡ್ಡಿಪಡಿಸಿದ್ದಾರೆ. ಇನ್ನೂ 19 ಸಿಡಿಗಳು ಇದೆಯಂತೆ. ಇದನ್ನ ನಾವಲ್ಲ, ಅವರೇ ಹೇಳಿಕೊಂಡಿದ್ದಾರೆ. ಗೋಪಾಲಯ್ಯ ಮಾತ್ರ ತಪ್ಪು ಮಾಡಿಲ್ವಂತೆ. ನಾನು ತಪ್ಪು ಮಾಡಿಲ್ಲ ಕೋರ್ಟ್ ಗೆ ಹೋಗಲ್ಲ ಅಂದಿದ್ದಾರೆ. ಉಳಿದ ಎಲ್ಲರೂ ಆತಂಕದಲ್ಲಿದ್ದಾರೆ. ಅವರಿಗೆ ಸಿಡಿ ಭಯ ಕಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದರು.

Former CM- Siddaramaiah- warns- implemented-anugraha
siddaramaih#profile..

ಇವರಿಗೆ ಭಯ ಇರೋದಕ್ಕೆ ತಾನೇ ಇಂಜೆಕ್ಷನ್ ತೆಗೆದುಕೊಂಡಿರೋದು. ತಪ್ಪು ಮಾಡದಿದ್ದರೆ ಯಾಕೆ ‌ಹೋಗ್ಬೇಕಿತ್ತು. ಸಿಎಂ,ನಿರಾಣಿ ಸೇರಿ ಹಲವು ಸಚಿವರು ಹೋಗ್ಬೇಕಿತ್ತು. ಸಿಎಂ ಸ್ಥಾನದಲ್ಲಿ‌ ಮುಂದುವರಿಯುವ ನೈತಿಕತೆ ಇಲ್ಲ. ರಾಜ್ಯದಲ್ಲಿರುವುದು ಅನೈತಿಕ ಸರ್ಕಾರ. ಈ ಅನೈತಿಕ ಸರ್ಕಾರ ಬಜೆಟ್ ಮಂಡಿಸುತ್ತಿದೆ. ಇವರು ಓದೋದನ್ನ ನಾವು ಕೇಳಿಸಿಕೊಳ್ಬೇಕಾ. ಅದಕ್ಕೆ ನಾವು ಪ್ರತಿಭಟನೆ ನಡೆಸುತ್ತೇವೆ. ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸುತ್ತೇವೆ. ನಿಮ್ಮದು ಅನೈತಿಕ ಸರ್ಕಾರ. ನಿಮಗೆ ಬಜೆಟ್ ಮಾಡೋಕೆ ನೈತಿಕತೆಯಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

Key words:  Congress- will -walk through –session- budget-Opposition leader- Siddaramaiah