ಮುಂದೆ ನಮ್ಮ ಸರ್ಕಾರದಲ್ಲಿ ಬಿಜೆಪಿ ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡುವೆವು ಚಿಂತಿಸಬೇಡಿ- ರಾಜ್ಯ ಕಾಂಗ್ರೆಸ್ ಟಾಂಗ್.

Promotion

ಬೆಂಗಳೂರು,ಸೆಪ್ಟಂಬರ್, 29,2021(www.justkannada.in):  ಆ ಮಾಜಿ ಸಿಎಂ ಸಿದ್ಧರಾಮಯ್ಯಗೆ ಪಂಚೆ  ಬಗ್ಗೆ ಟೀಕಿಸಿದ್ದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ರಾಜ್ಯ ಕಾಂಗ್ರೆಸ್ , ಮುಂದೆ ಸಮ್ಮ ಸರ್ಕಾರದಲ್ಲಿ ಬಿಜೆಪಿ ನಾಯಕರಿಗೆ ಕಳಚಲಾಗದ ಪ್ಯಾಂಟ್ ಭಾಗ್ಯ ನೀಡುವೆವು ಚಿಂತಿಸಬೇಡಿ ಎಂದು ಟಾಂಗ್ ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಪಂಚೆ ಈ ನೆಲದ ಸಂಸ್ಕೃತಿಯ ಪ್ರತೀಕ, ಶ್ರಮಜೀವಿಗಳ ಸಂಗಾತಿ, ಪಂಚೆ ಕಳಚುವುದು ಎತ್ತಿ ಕಟ್ಟುವುದೂ ಸಹಜ, ಅದೇ ಕರುನಾಡ ಮಣ್ಣಿನ ಮಕ್ಕಳ ಗತ್ತು. ಕಂಡ ಕಂಡಲ್ಲಿ ತಮ್ಮ ಪ್ಯಾಂಟ್ ಕಳಚಿ ಸಿಡಿ ಮಾಡಿಕೊಳ್ಳುವ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯನವರ ಪಂಚೆಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮೊದಲು ತಮ್ಮ ಚಡ್ಡಿಯ ಲಾಡಿ ಭದ್ರ ಪಡಿಸಿಕೊಳ್ಳಲಿ ಎಂದು ಲೇವಡಿ ಮಾಡಿದೆ.

ಹಾಗೆಯೇ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕಾಂಗ್ರೆಸ್, ಸಿದ್ದರಾಮಯ್ಯ ಅವರ ಪಂಚೆ ಆಕಸ್ಮಿಕವಾಗಿ ಕಳಚಿಬೀಳುವುದು ಸಹಜ, ಆದರೆ ಬಿಜೆಪಿ ನಾಯಕರು ತಮ್ಮ ಪ್ಯಾಂಟ್‌ ಅನ್ನ ತಾವೇ ಕಳಚುವುದು ಅಸಹ್ಯ. ಕಳಚಿದ ನಂತರ ವಿಡಿಯೋ ಮಾಡಿಕೊಳ್ಳುವುದು, ಸಿಡಿ ಬಿಡುಗಡೆಗೆ ತಡೆಯಾಜ್ಞೆ ತರುವುದು ಪರಮ ಅಸಹ್ಯ.  ಮುಂದೆ ಸಮ್ಮ ಸರ್ಕಾರದಲ್ಲಿ ಬಿಜೆಪಿ ನಾಯಕರಿಗೆ ಕಳಚಲಾಗದ ಪ್ಯಾಂಟ್ ಭಾಗ್ಯ ನೀಡುವೆವು ಚಿಂತಿಸಬೇಡಿ ಎಂದು ಕಿಡಿಕಾರಿದೆ.

Key words: congress- tong- BJP-Panche-pant baghya-tweet