ಕಾಂಗ್ರೆಸ್ ನಾಮಕಾವಸ್ತೆಗೆ ಅಧ್ಯಕ್ಷ ಚುನಾವಣೆ ಮಾಡುತ್ತಿದೆ- ಶಾಸಕ ಸಿ.ಟಿ ರವಿ ಟೀಕೆ.

BL Santosh - selection -candidates - Rajya Sabha-minister-CT Ravi.
Promotion

ಬೆಂಗಳೂರು,ಅಕ್ಟೋಬರ್,18,2022(www.justkannada.in): ಬಿಜೆಪಿಯಲ್ಲಿ ಅಧ್ಯಕ್ಷ ಚುನಾವಣೇ ಇಲ್ಲ ಅಂತಾ ಹೇಳಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ನಾಮಕಾವಸ್ತೆಗೆ ಅಧ್ಯಕ್ಷ ಚುನಾವಣೆ  ನಡೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಮಲ್ಲಿಕಾರ್ಜುನ ಖರ್ಗೆ  ರಬ್ಬರ್ ಸ್ಟಾಂಬ್ ಅಧ್ಯಕ್ಷರ ರೀತಿ ಆಗುತ್ತಾರೆ. ಕೇಸರಿ, ರಾವ್ ಗೆ ಆದ ಪರಿಸ್ಥಿತಿ ಖರ್ಗೆಗೂ ಆಗಲಿದೆ .  ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ ಆಗುತ್ತಿರುವುದು ಡಿಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯಗೆ ಭಯ ತರಿಸುತ್ತಿದೆ ಎಂದು ಟಾಂಗ್ ನೀಡಿದರು.BL Santosh - selection -candidates - Rajya Sabha-minister-CT Ravi.

ನಿನ್ನೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ನಾಳೆ ಫಲಿತಾಂಶ ಪ್ರಕಟವಾಗಲಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಸ್ಪರ್ಧಾ ಕಣದಲ್ಲಿದ್ದಾರೆ.

Key words: Congress -presidential -election – MLA- CT Ravi -criticizes