ಕರ್ನಾಟಕದಲ್ಲಿ ಕಾಸುಕೊಟ್ಟರೇ ಕೆಲಸ ಎಂದು ಆರೋಪಿಸಿದ್ಧ ರಾಹುಲ್ ಗಾಂಧಿಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು.

ಬೀದರ್ ,ಅಕ್ಟೋಬರ್,18,2022(www.justkannada.in): ಕರ್ನಾಟಕದಲ್ಲಿ ಕಾಸುಕೊಟ್ಟರೇ ಕೆಲಸ ಎಂದು ಸರ್ಕಾರದ ವಿರುದ್ಧ ಆರೋಪಿಸಿದ್ಧ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಬೀದರ್ ನಲ್ಲಿ ನಡೆದ ಬಿಜೆಪಿ ಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬಮ್ಮಾಯಿ, ಸಿದ್ದರಾಮಯ್ಯ ಕಾಲದ ಭ್ರಷ್ಟಾಚಾರದ ದಾಖಲೆ ನೀಡುವೆ. ಕಾಂಗ್ರಸ್ ಸರ್ಕಾರದಲ್ಲಿ ಅರ್ಜಿ ಕರೆಯದೇ ಕೆಲಸ ಕೊಡುತಿದ್ದರು.  ರಾಹುಲ್ ಗಾಂಧಿಗೆ ಎಲ್ಲಾ ದಾಖಲೆಗಳನ್ನು ಕಳಿಸಿಕೊಡಿತ್ತೇನೆ ಎಂದರು.

ನಿಮ್ಮೆಲ್ಲರ ಆಶೀರ್ವಾದದಿಂಧ ರಾಜ್ಯದಲ್ಲಿ ನಮ್ಮ ರ್ಕಾರವಿದೆ ಬೆಳೆ ಹಾನಿಯಾದಾಗ ಕೇಂಧ್ರ 2 ಪಟ್ಟು ಪರಿಹಾರ ಕೊಟ್ಟಿದೆ. ನಮ್ಮ ಸರ್ಕಾರದಲ್ಲಿ ಕೆಲವೇ ತಿಂಗಳಲ್ಲಿ ರೈತರಿಗೆ ಪರಿಹಾರ ನೀಡಿದೆ. ತಾಂಡಾ ಅಭಿವೃದ್ದಿಗೆ 100 ಕೋಟಿ ನೀಡಲಾಗುತ್ತಿದೆ. ಬಿಜೆಪಿ ಸಂಕಲ್ಪಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದರು.

Key words: CM -Basavaraj Bommai – Rahul Gandhi –working-bribes – Karnataka.