ವಿಧಾನಸಭೆಯಲ್ಲಿ ಕೈ ಶಾಸಕಾಂಗ ಪಕ್ಷದ ಸಭೆ: ಸದನದಲ್ಲಿ ಬಿಜೆಪಿಗೆ ಟಾಂಗ್ ಕೊಡುವ ಬಗ್ಗೆ ರಣತಂತ್ರ..

Promotion

ಬೆಂಗಳೂರು,ಜು,29,2019(www.justkannada.in): ಸಿಎಂ ಬಿ.ಎಸ್ ಯಡಿಯೂರಪ್ಪ ಸದನದಲ್ಲಿ ವಿಶ್ವಾಸಮತಯಾಚನೆ ಮಾಡಲಿದ್ದು, ಈ ಹಿನ್ನೆಲೆ  ಇಂದು ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಪರೇಷನ್ ಕಮಲ ಇತರೆ ವಿಷಯಗಳ ಕುರಿತು ಬಿಜೆಪಿಗೆ ಟಾಂಗ್ ಕೊಡುವ ಬಗ್ಗೆ  ಚರ್ಚೆ ನಡೆಸಿದರು.

ವಿಧಾನಸೌಧದಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಭಾಗವಹಿಸಿದ್ದರು. ಕಾಂಗ್ರೆಸ್ ಬಹುತೇಕ ಶಾಸಕರು ಸಭೆಗೆ ಅಗಮಿಸಿದ್ದರು.

ಸದನದಲ್ಲಿ ಕೈ ನಾಯಕರು ಇರುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇನ್ನು ಸಭೆಯಲ್ಲಿ ಅಪರೇಷನ್ ಕಮಲ ಇತರೆ ವಿಷಯಗಳ ಬಗ್ಗೆ ಬಿಜೆಪಿಗೆ ಸದನದಲ್ಲಿ ಟಾಂಗ್ ಕೊಡಲು ರಣತಂತ್ರ ರೂಪಿಸಲಾಗಿದೆ.

Key words: congress-Legislative Party -Meeting – Assembly.