ಇಂದು ವಿಶ್ವಾಸಮತಯಾಚನೆ ಹಿನ್ನೆಲೆ: ಅಂಜನೇಯ ದೇವಸ್ಥಾನಕ್ಕೆ ಭೇಟಿ  ನೀಡಿದ ದರ್ಶನ ಪಡೆದ ಸಿಎಂ ಬಿಎಸ್ ಯಡಿಯೂರಪ್ಪ..

ಬೆಂಗಳೂರು,ಜು,29,2019(www.justkannada.in):  ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿಎಸ್ ಯಡಿಯೂರಪ್ಪ ಇಂದು ವಿಶ್ವಾಸಮತಯಾಚನೆ ಮಾಡಲಿದ್ದಾರೆ. ಈ ನಡುವೆ ಸಂಜಯನಗರದಲ್ಲಿರುವ ಅಂಜನೇಯ ದೇವಸ್ಥಾನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಇಂದು  ಸಂಜಯನಗರದ ಆಂಜನೇಯ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಸಿಎಂ ಬಿಎಸ್ ಯಡಿಯೂರಪ್ಪ ಇದೀಗ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಈ ನಡುವೆ ಇಂದು ಸಿಎಂ ಬಿಎಸ್ ವೈ ಸದನದಲ್ಲಿ ಬಹುಮತ ಸಾಬೀತು ಪಡಿಸಲಿದ್ದಾರೆ. ಈಗಾಗಲೇ 17 ಮಂದಿ ಅತೃಪ್ತ ಶಾಸಕರು ಅನರ್ಹಗೊಂಡಿದ್ದು 105  ಮ್ಯಾಜಿಕ್ ನಂಬರ್ ಆಗಿದೆ. ಇನ್ನು ಬಹುಮತ ಸಾಬೀತಿಗೆ ಬೇಕಾದ ಬಲಾಬಲ ಬಿಜೆಪಿಗೆ ಇದೆ. ಬಿಜೆಪಿ 105 ಸ್ಥಾನ ಮತ್ತು ಓರ್ವ ಪಕ್ಷೇತರ ಶಾಸಕ ಬಿಜೆಪಿಗೆ ಬೆಂಬಲ ನೀಡಿದ್ದು ಹೀಗಾಗಿ ಇಂದು ಬಿಎಸ್ ವೈ ಸುಲಭವಾಗಿ ವಿಶ್ವಾಸಮತಯಾಚನೆ ಗೆಲ್ಲುವ ಸಾಧ್ಯತೆ ಇದೆ.

Key words: Today – Prove – majority- CM-BS Yeddyurappa -Anjaneya Temple.