ಚಿತ್ರದುರ್ಗದ ಮುರುಘಾಮಠಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ: ಡಿಕೆ ಶಿವಕುಮಾರ್ ಸಾಥ್.

Promotion

ಚಿತ್ರದುರ್ಗ,ಆಗಸ್ಟ್,3,2022(www.justkannada.in): ಸಿದ್ಧರಾಮೋತ್ಸವ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ಇಂದು ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ನೀಡಿದ್ದಾರೆ.

ಇಂದು ಬೆಳಗ್ಗೆ ಹುಬ್ಬಳ್ಳಿಯಿಂದ ಚಿತ್ರದುರ್ಗಕ್ಕೆ  ಬಂದಿಳಿದ ರಾಹುಲ್ ಗಾಂಧಿ ಮುರುಘಾ ಮಠಕ್ಕೆ ಭೇಟಿ ನೀಡಿ ಡಾ. ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದಿದ್ದಾರೆ.  ರಾಹುಲ್ ಗಾಂಧಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಸಾಥ್ ನೀಡಿದ್ದಾರೆ.  ಇನ್ನು ರಾಹುಲ್ ಗಾಂಧಿಗೆ ಮುರುಘಾಶ್ರೀಗಳು ಹಾರ ಶಾಲು ಹಾಕಿ ಬಸವಣ್ಣನವರ ಫೋಟೊ ನೀಡಿ ಸನ್ಮಾನಿಸಿದರು.

ರಾಹುಲ್ ಗಾಂಧಿ  ಅವರು ಮಠದ ಸ್ವಾಮೀಜಿಗಳ ಜೊತೆಗೆ ಸಂವಾದ ನಡೆಸಲಿದ್ದಾರೆ. ನಂತರ ಸಿದ್ದರಾಮಯ್ಯ ಅವರ ಜನ್ಮದಿನದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Key words: Congress leader -Rahul Gandhi -visits -Chitradurga’s -Muruga Math.

ELGLISH SUMMARY…

Cong. leader Rahul Gandhi visits Murughamath in Chitradurga: DKS accompanies
Chitradurga, August 3, 2022 (www.justkannada.in): Congress leader Rahul Gandhi who is Karnataka to participate in the Siddaramotsava program today visited the Murughamath in Chitradurga.
Rahul Gandhi arrived at Chitradurga from Hubballi today morning and visited the Murugha Math and had the blessings of Dr. Shivamurthy Murugha sharana. He was accompanied by KPCC President D.K. Shivakumar and Chairman of the Opposition in the Legislative Council B.K. Hariprasad. He was felicitated by the seer with a shawl and Basavanna’s portrait.
Rahul Gandhi will have a meeting with the Swamiji of the Murugha Math, before taking part in Siddaramotsava.
Keywords: Siddaramotsava/ Murugha Math/ Chitradurga/ Rahul Gandhi