ರಾಜ್ಯದಲ್ಲಿ ಭಾರಿ ಮಳೆಯಿಂದ ಜನ ಸಂಕಷ್ಟದಲ್ಲಿದ್ದಾರೆ: ಈ ಸಮಯದಲ್ಲಿ ಸಿದ್ದರಾಮೋತ್ಸವ ಬೇಕಿತ್ತಾ…? ಬಿಜೆಪಿ ವಕ್ತಾರ ರವಿಕುಮಾರ್ ಟೀಕೆ.

ಬೆಂಗಳೂರು,ಆಗಸ್ಟ್,3,2022(www.justkannada.in): ಸಿದ್ಧರಾಮಯ್ಯ ಅವರ 75ನೇ ವರ್ಷದ ಹುಟ್ಟಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ಧರಾಮೋತ್ಸವದ ಬಗ್ಗೆ ಬಿಜೆಪಿ ವಕ್ತಾರ ರವಿ ಕುಮಾರ್ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿದ ರವಿ ಕುಮಾರ್, ಸಿದ್ದರಾಮೋತ್ಸವದಿಂದ ಬಿಜೆಪಿಗೆ ಭಯ ಇಲ್ಲ. ಅದು ಕಾಂಗ್ರೆಸ್ ಉತ್ಸವ ಅಲ್ಲ ಸಿದ್ಧು ಉತ್ಸವ.  ಪಾರ್ಟಿ ಬಲಗೊಳಿಸಿಲು ಆಯೋಜಿಸಿರುವ ಕಾರ್ಯಕ್ರಮವಲ್ಲ.  ಡಿಕೆಶಿ, ಜಮೀರ್ ಹೀಗೆ ಅನೇಕರ ಉತ್ಸವ ಮಾಡಬಹುದು ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ 13 ಜನ ಮೃತ ಪಟ್ಟಿದ್ದಾರೆ. ಆದರೆ ಕಾಂಗ್ರೆಸ್ ನವರು ಸಿದ್ಧರಾಮೋತ್ಸವ ಮಾಡುತ್ತಿದ್ದಾರೆ ಜನ ಶೋಕದಲ್ಲಿರುವಾಗ ಕಾರ್ಯಕ್ರಮ ಬೇಕಿತ್ತಾ..?  ನಾವು ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದ್ದವು.  ಆದರೆ ಸಿದ್ಧರಾಮೋತ್ಸವವನ್ನ ಕಾಂಗ್ರೆಸ್ ನವರು ರದ್ದು ಮಾಡಲಿಲ್ಲ. ರಾಹುಲ ಗಾಂಧಿ ಭಾಗವಹಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಇದು ಬೇಕಿತ್ತಾ..? ಎಂದು ರವಿಕುಮಾರ್ ಪ್ರಶ್ನಿಸಿದರು.

Key words: People – suffering – heavy rains-Need- Siddaramaotsava-BJP spokesperson-Ravikumar