ರಾಮಮಂದಿರ ಶಿಲಾನ್ಯಾಸ ಮುಹೂರ್ತ ಅಶುಭ: ಭೂಮಿಪೂಜೆ ಮುಂದೂಡಿ-ಪ್ರಧಾನಿ ಮೋದಿಗೆ ಕೈ ನಾಯಕ ದಿಗ್ವಿಜಯ್ ಸಿಂಗ್ ಮನವಿ…

Promotion

ನವದೆಹಲಿ,ಆ,3,2020(www.justkannada.in): ಅಗಸ್ಟ್ 5 ರಂದು ಅಯೋಧ್ಯಾದಲ್ಲಿ ನಡೆಯುವ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮವನ್ನ ಮುಂದೂಡುವಂತೆ  ಕಾಂಗ್ರೆಸ್  ನಾಯಕ ದಿಗ್ವಿಜಯ್ ಸಿಂಗ್ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.jk-logo-justkannada-logo

ಅಗಸ್ಟ್ 5 ರಂದು ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣ  ಶಿಲನ್ಯಾಸ ಕಾರ್ಯಕ್ರಮ ನಡೆಯಲಿದ್ದು ಪ್ರಧಾನಿ ಮೋದಿ ಅವರು ಚಾಲನೆ ನೀಡಲಿದ್ದಾರೆ. ಆದರೆ ಮೋದಿ ಅವರು ಶಿಲಾನ್ಯಾಸ ಮಾಡಲಿರುವ ಮುಹೂರ್ತ ಸರಿಯಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.congress-leader-digvijay-singh-pm-modi-postpone-ramamandir-worship

ಈ ಕುರಿತು ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್,  ಅಯೋಧ್ಯಾ ಮಂದಿರದ ಅರ್ಚಕರಿಗೆ ಕೊರೊನಾವೈರಸ್ ಬಂದಿದೆ. ಯುಪಿ ಸಚಿವರು, ಬಿಜೆಪಿ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಸೋಂಕು ತಗುಲಿದೆ.  ರಾಮಮಂದಿರ ಶಿಲನ್ಯಾಸ ಮುಹೂರ್ತ ಅಶುಭವಾದದ್ದು ಹೀಗಾಗಿ  ಭೂಮಿಪೂಜೆ ಕಾರ್ಯಕ್ರಮವನ್ನ ಮುಂದೂಡಿ. ಯೋಗಿ ಆದಿತ್ಯನಾಥ್ ಅವರೇ ಈ ಬಗ್ಗೆ ಪ್ರಧಾನಿ ಮೋದಿಗೆ ಮನವರಿಕೆ ಮಾಡಿಕೊಡಿ ಎಂದು ಹೇಳಿದ್ದಾರೆ.

Key words: congress- leader-Digvijay Singh -PM Modi – postpone –ramamandir- worship