ಶಾಸಕ ತನ್ವೀರ್ ಸೇಠ್ ಆಪ್ತನಿಗೆ ಕಾಂಗ್ರೆಸ್‌ ನಿಂದ ನೋಟೀಸ್‌ ಜಾರಿ…

Promotion

ಮೈಸೂರು,ಮಾರ್ಚ್,15,2021(www.justkannada.in): ಮೈಸೂರು ಪಾಲಿಕೆ ಮೇಯರ್ ಚುನಾವಣೆ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ತನ್ವೀರ್‌ ಸೇಠ್ ಪರಮಾಪ್ತನ  ವಿರುದ್ಧ ಕ್ರಮಕ್ಕೆ ಮೈಸೂರು ನಗರ ಕಾಂಗ್ರೆಸ್‌ ಮುಂದಾಗಿದೆ.jk

ಶಾಸಕ ತನ್ವೀರ್ ಸೇಠ್ ಆಪ್ತ ಹಾಗೂ ಎನ್‌.ಆರ್‌.ಕ್ಷೇತ್ರದ ಅಜೀಜ್‌ ಸೇಠ್ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಅಬ್ದುಲ್ ಖಾದರ್ ಶಾಹಿದ್‌ ಗೆ ಕಾರಣ ಕೇಳಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ನೋಟೀಸ್ ಜಾರಿ ಮಾಡಿದ್ದಾರೆ.

ಪಾಲಿಕೆ ಚುನಾವಣೆ ನಂತರ ಜ.26ರಂದ ಶಾಸಕ ತನ್ವೀರ್‌ ಮನೆ ಮುಂದೆ ಪ್ರತಿಭಟನೆ ನಡೆದಿತ್ತು. ಆ ಪ್ರತಿಭಟನೆಯಲ್ಲಿ ನೀವು ಕೆಲ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸೇರಿ ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿರುತ್ತೀರಿ?. ಇದು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗಿರುತ್ತದೆ. ನಿಮ್ಮ ಪ್ರತಿಭಟನೆಯಿಂದ ಪಕ್ಷದ ಘನತೆ ಹಾಗೂ ನಾಯಕರ ಘನತೆಗೆ ಕುಂದು ಉಂಟಾಗಿರುತ್ತದೆ.  ಇದು ಪಕ್ಷ ವಿರೋಧಿ ಚಟುವಟಿಕೆಯಾಗಿರುತ್ತದೆ.  ಈ ಕಾರಣದಿಂದ ಕೆಪಿಸಿಸಿ ಸೂಚನೆ ಮೇರೆಗೆ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಉತ್ತರ ನೀಡಿ.  7 ದಿನದ ಒಳಗೆ ಉತ್ತರ ನೀಡಿ ಎಂದು ನೋಟಿಸ್ ಜಾರಿ ಮಾಡಲಾಗಿದೆ. Congress- issues- notice –MLA- Tanveer Sait-close-adbul khaddar sahid

ಅಬ್ದುಲ್ ಖಾದರ್ ಸೇರಿ 8 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಕಾಂಗ್ರೆಸ್‌ ಕಿತ್ತಾಟದ ಬೆಂಕಿಗೆ ತನ್ವೀರ್ ಆಪ್ತರಿಗೆ ನೋಟಿಸ್‌ ವಿಚಾರ ಮತ್ತಷ್ಟು ತುಪ್ಪ ಸುರಿದಿದೆ. ಈ ಮೂಲಕ ತನ್ವೀರ್‌ ಸೇಠ್ ಬೆಂಬಲಿಗನಿಗೆ ನೋಟಿಸ್ ಕೊಡಿಸುವಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಯಶಸ್ವಿಯಾದ್ರಾ ಎಂಬ ಪ್ರಶ್ನೆ ಮೂಡಿದೆ.

Key words: Congress- issues- notice –MLA- Tanveer Sait-close-adbul khaddar sahid