ಮಲ್ಲಿಕಾರ್ಜುನ ಖರ್ಗೆ ಅವರನ್ನ ಸಿಎಂ ಮಾಡಲು ‘ಕೈ’ ಹೈಕಮಾಂಡ್ ಒಪ್ಪಲಿಲ್ಲ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿಕೆ

Promotion

ಕಲಬುರಗಿ,ನ,11,2019(www.justkannada.in): ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ವೇಳೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು  ಸಿಎಂ ಮಾಡುವಂತೆ ಹೇಳಿದ್ದೆ. ಆದರೆ ಅದಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿರಲಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.

ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು,  ನಾನು ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆರನ್ನು ಸಿಎಂ ಮಾಡಿ. ನಿಮಗೆ ಬೆಂಬಲ ಸಂಪೂರ್ಣ ನೀಡುತ್ತೇವೆ ಅಂತಾ ಕಾಂಗ್ರೆಸ್ ಹೈಕಮಾಂಡ್ ಗೆ ಹೇಳಿದ್ದೆ . ಖರ್ಗೆ ಸಿಎಂ ಆಗಲು ಸಿದ್ದರಾಮಯ್ಯನವರು ಸಹ ಒಪ್ಪಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಲಿಲ್ಲ. ಕುಮಾರಸ್ವಾಮಿ ಸಿಎಂ ಆಗಲಿ ಎಂದರು  ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಸರ್ಕಾರಕ್ಕೆ ಸದ್ಯದ ಮಟ್ಟಿಗೆ ಅಪಾಯ ಇಲ್ಲ ಅನಿಸುತ್ತಿದೆ. ಕಾಂಗ್ರೆಸ್ ಮತ್ತು ನಾವು ಹೊಂದಾಗಿಲ್ಲ. ಹೀಗಾಗಿ ಅಪಾಯವಿಲ್ಲ. ಆದರೆ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟವಾದರೆ ಅದು ನನಗೆ ಗೊತ್ತಿಲ್ಲ. ಬೈ ಎಲೆಕ್ಷನ್ ಆಗುವುದರಿಂದ ಮಧ್ಯಂತರ ಚುನಾವಣೆ ಬರುವುದಿಲ್ಲ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.

ಇದೇ ವೇಳೆ ಬಿಜೆಪಿಗೆ ಟಾಂಗ್ ಕೊಟ್ಟ ಹೆಚ್.ಡಿಡಿ, ಅಂದು ಇಂದಿರಾ ಗಾಂಧಿ ಅವರನ್ನ ಅಧಿಕಾರದಿಂದ ಕೆಳಗಿಳಿಸಲು  ಹಲವು ಪಕ್ಷಗಳು ಒಂದಾಗಿದ್ದವು. ಇದೀಗ ಬಿಜೆಪಿಗೆ ಪಾಠ ಕಲಿಸಲು ಮಹಾರಾಷ್ಟ್ರದಲ್ಲಿ  ಹಲವು ಪಕ್ಷಗಳು ಒಂದಾಗುತ್ತಿವೆ ಎಂದು ನುಡಿದರು.

Key words: Congress- High Command – not agree- Mallikarjuna Kherge- CM- former Prime Minister -HD DeveGowda