Saturday, August 22, 2026

BDA Apartments

Home Front Page ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ: ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಕನಿಷ್ಟ 12 ಕ್ಷೇತ್ರದಲ್ಲಿ ಗೆಲ್ಲುತ್ತೆ-...

ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ: ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಕನಿಷ್ಟ 12 ಕ್ಷೇತ್ರದಲ್ಲಿ ಗೆಲ್ಲುತ್ತೆ- ಮಾಜಿ ಸಿಎಂ ಸಿದ್ಧರಾಮಯ್ಯ ವಿಶ್ವಾಸ…

ಬೆಂಗಳೂರು,ನ. 11,2019(www.justkannada.in): ರಾಜ್ಯದಲ್ಲಿ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಕನಿಷ್ಠ 12 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರದ ಆರ್ಥಿಕ ನೀತಿ ವಿರುದ್ದ ಇಂದು ಬೆಂಗಳೂರಿನ ಟೌನ್ ಹಾಲ್ ಬಳಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ  ನಡೆಸಿತು., ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ವಿ.ಎಸ್. ಉಗ್ರಪ್ಪ ಸೇರಿ ಹಲವರು ಉಪಸ್ಥಿತರಿದ್ದರು.

ಇದೇ ವೇಳೆ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ನರೇಂದ್ರ ಮೋದಿ ಅವರೇ, ಬಹಳ ದಿನ ನಿಮ್ಮ ನಾಟಕ ನಡೆಯಲ್ಲ. ಒಂದು ಅಥವಾ ಎರಡು ಬಾರಿ ಭಾವನಾತ್ಮಕ ವಿಚಾರಗಳಲ್ಲಿ ಜನರನ್ನು ಸೆಳೆಯಬಹುದು. ಅದರೆ ಇದು ಬಹಳ ದಿನ ನಡೆಯಲ್ಲ. ನೋಟ್ ಬ್ಯಾನ್ ನಿಂದ ಯಾರಿಗೂ ಲಾಭವಾಗಲಿಲ್ಲ. ಆದರೆ ಅಂಬಾನಿ ಅದಾನಿಗೆ ಮಾತ್ರ ಅನುಕೂಲವಾಗಿದೆ ಎಂದು  ಕಿಡಿಕಾರಿದರು.

ಇನ್ನು, ರಾಜ್ಯ ಬಿಜೆಪಿ ವಿರುದ್ಧ  ಹರಿಹಾಯ್ದ ಸಿದ್ದರಾಮಯ್ಯ, ಯಡಿಯೂರಪ್ಪ  ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಅವರಿಗೆ ಜನಾಶೀರ್ವಾದ ಇಲ್ಲ. ನಮ್ಮ ಶಾಸಕರನ್ನು ದುಡ್ಡು ಕೊಟ್ಟು  ಖರೀದಿಸಿದ್ದಾರೆ. ಜನರು ಪಕ್ಷಾಂತರಿಗಳನ್ನ ಸಹಿಸಲ್ಲ. ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ. ಇವರನ್ನು ಸೋಲಿಸಲು ಜನರು ಕಾಯುತ್ತಿದ್ದಾರೆ. 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕನಿಷ್ಠ 12ರಲ್ಲಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: by-election- Congress –win- – 12 seats -Former CM-Siddaramaiah