ರೌಡಿಸಂ ಹುಟ್ಟಿ ಹಾಕಿದ್ದೇ ಕಾಂಗ್ರೆಸ್- ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ.

august-15-number-coronavirus-infections-increase-minister-dr-k-the-reformer
Promotion

ಬೆಂಗಳೂರು,ಡಿಸೆಂಬರ್,5,2022(www.justkannada.in): ಬಿಜೆಪಿಗೆ ರೌಡಿ ಶೀಟರ್ ಸೇರ್ಪಡೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಗೆ ತಿರುಗೇಟು ನೀಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರೌಡಿಸಂ ಹುಟ್ಟಿ ಹಾಕಿದ್ದೇ ಕಾಂಗ್ರೆಸ್ ನವರು ಕಾಂಗ್ರೆಸ್ ಇತಿಹಾಸ ನೋಡಿದರೇ ತಿಳಿಯುತ್ತೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸುಧಾಕರ್, ಬಿಜೆಪಿ ರೌಡಿ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿರುವುದು ಹಾಸ್ಯಸ್ಪದ.  ಕಾಂಗ್ರೆಸ್ ನಾಯಕರ ಇತಿಹಾಸ  ಒಮ್ಮೆ ನೋಡಿದರೇ ಯಾರ್ಯಾರ  ಹಿನ್ನೆಲೆ ಏನು  ಅಂತಾ ಗೊತ್ತಾಗುತ್ತದೆ. ಕಾಂಗ್ರೆಸ್ ಮಾತನಾಡೋದನ್ನ ಕೇಳಿದ್ರೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ  ಕಾಂಗ್ರೆಸ್ ನವರು ಕಡಿಮೆ ಮಾತನಾಡಿದರೇ ಅವರಿಗೆ ಒಳ್ಳೆಯದು ಎಂದು ವ್ಯಂಗ್ಯವಾಡಿದರು.august-15-number-coronavirus-infections-increase-minister-dr-k-the-reformersud

Key words: Congress – created –rowdyism-Minister -Dr. K. Sudhakar