ಸಿದ್ದರಾಮಯ್ಯರನ್ನ ಸೋಲಿಸಲು ಕಾಂಗ್ರೆಸ್ ನಲ್ಲೇ ಕುತಂತ್ರ- ಸಚಿವ ಅಶ್ವಥ್ ನಾರಾಯಣ್ ಹೊಸಬಾಂಬ್.

Promotion

ಮಂಡ್ಯ,ಮೇ,8,2023(www.justkannada.in): ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಂಗ್ರೆಸ್ ನವರೇ ಕುತಂತ್ರ ಮಾಡಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ್ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಸಿದ್ಧರಾಮಯ್ಯರನ್ನ ಸೋಲಿಸಲು ವಿಪಕ್ಷಗಳು ಮಾತ್ರವಲ್ಲದೇ ಸ್ವಪಕ್ಷದವರೇ ಸೋಲಿಸಲು ಹುನ್ನಾರ ರೂಪಿಸುತ್ತಿದ್ದಾರೆ.  ಯಾರು ಷಡ್ಯಂತ್ರ ನಡೆಸಿದ್ದಾರೆಂಬುದರ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಆದರೆ ಯಾರು ಕುತಂತ್ರ ನಡೆಸಿದ್ದಾರೆಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಸಿದ್ದರಾಮಯ್ಯ ಅವರು ಸೋಲುವುದನ್ನು ನೋಡಲು ಅವರ ಪಕ್ಷದವರು ಕಾದು ಕುಳಿತಿದ್ದಾರೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ಸೋಲಿಗೆ ಬೇಕಾದ ತಯಾರಿ ಅವರ ನಾಯಕರೇ ಮಾಡುತ್ತಿದ್ದಾರೆ. ಅವರನ್ನು ಸೋಲಿಸಬೇಕು ಅಂತಿರೋದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಸಿದ್ದರಾಮಯ್ಯ ಅವರಿಗೆ ತುಂಬಾ ಆತಂಕ ಇದೆ. ಹೀಗಾಗಿ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬೀಡು ಬಿಟ್ಟಿದ್ದಾರೆ ಎಂದು ಅಶ‍್ವಥ್ ನಾರಾಯಣ್ ತಿಳಿಸಿದರು.

Key words: Congress- conspiracy– defeat- Siddaramaiah- Ashwath Narayan