ಲಿಂಗಾಯತರ ಕುರಿತು ಬಿಎಲ್ ಸಂತೋಷ್ ಮಾತನಾಡಿರುವ ಬಗ್ಗೆ ತನಿಖೆಯಾಗಲಿ- ಜಗದೀಶ್ ಶೆಟ್ಟರ್ ಆಗ್ರಹ.

ಹುಬ್ಬಳ್ಳಿ,ಮೇ,8,2023(www.justkannada.in): ಲಿಂಗಾಯತರ ಕುರಿತು ಬಿಎಲ್ ಸಂತೋಷ್ ಮಾತನಾಡಿರುವ ಬಗ್ಗೆ ತನಿಖೆಯಾಗಲಿ. ಅದು ಫೇಕ್ ಅಂತಾ ಹೇಳಿದ್ರೂ ಅದರ ಬಗ್ಗೆ ತನಿಖೆ ಮಾಡಿಸಬೇಕಲ್ಲವೇ ಎಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಗದೀಶ್ ಶೆಟ್ಟರ್,  ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ ಅವರನ್ನ ಮುಗಿಸುವ ಕೆಲೆಸ ಆಯಿತು. ನಳೀನ್ ಕುಮಾರ್ ಕಟೀಲ್ ಆಡಿಯೋ ವೈರಲ್ ಆಗಿತ್ತು. ಬಿಎಸ್ ವೈ, ಈಶ್ವರಪ್ಪ ಶೆಟ್ಟರ್ ರನ್ನು ಮುಗಿಸ್ತಿವಿ ಎಂದಿದ್ದರು. ಅವರು ಹೇಳಿದಂತೆ ಕೇಳಬೇಕು ಅನ್ನೋದು ಸಂತೋಷ್  ಹುನ್ನಾರ ಎಂದು ಮತ್ತೆ ಬಿ.ಎಲ್ ಸಂತೋಷ್ ವಿರುದ್ದ ಗುಡುಗಿದರು.

ಬಿಎಸ್ ಯಡಿಯೂರಪ್ಪಗೆ ಪ್ರಚೋದನೆ ಮಾಡಿ ಪಕ್ಷ ಕಟ್ಟಿಸಿದ್ದು ಇವರೇ.  ಸಿಎಂ ಬೊಮ್ಮಯಿ ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ ಎಂದಿದ್ದರು.  ಹೀಗಾಗಿ ಕಾಂಗ್ರೆಸ್ ಸೇರಲು ಹೋಗಿದ್ದರು ಎಂದು ಜಗದೀಶ್ ಶೆಟ್ಟರ್ ಕುಟುಕಿದರು.

Key words: bjp-BL Santhosh-outrage-congress-Jagadish shetter