ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಳಿಕ ಭಿನ್ನಮತ ಸ್ಪೋಟ- ಶಾಸಕ ಕೆ.ಎಸ್ ಈಶ್ವರಪ್ಪ.

Promotion

ಶಿವಮೊಗ್ಗ,ಮಾರ್ಚ್,17,2023(www.justkannada.in): ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡ್ತಾರೆ. ಪಟ್ಟಿ ರಿಲೀಸ್ ಬಳಿಕ ಭಿನ್ನಮತ ಸ್ಪೋಟವಾಗುತ್ತದೆ ಎಂದು ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಟಿಕೆಟ್ ಸಿಗದೇ ಇದ್ರೆ ನಿಮ್ಮದು ಯಾವುದೋ ಜನ್ಮದ ಪುಣ್ಯ. ಟಿಕೆಟ್ ತೆಗೆದುಕೊಂಡು ಯಾಕೆ ಸೋಲುತ್ತೀರಿ. ಹೆಸರು ಕೈಬಿಟ್ಟರೇ ನೀವು ಪುಣ್ಯವಂತರು ಎಂದು ತಿಳಿದುಕೊಳ್ಳಿ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಹೇಳಿದರು.

ಸಿದ್ಧರಾಮಯ್ಯಗೆ ಈಗಾಗಲೇ ಗೊತ್ತಾಗಿದೆ ಚನಾವಣೆಯಲ್ಲಿ ಗೆಲ್ಲಲ್ಲ ಅಂತಾ. ಒಂದು ಕಡೆ ಲಿಂಗಾಯತರನ್ನ ಒಡೆದರು.  ಪರಮೇಶ್ವರ್ ಮುನಿಯಪ್ಪರನ್ನ ಸೋಲಿಸಿದರು. ಹೀಗಾಗಿ ದಲಿತರ ವೋಟು ಕಾಂಗ್ರೆಸ್ ಗೆ ಬೀಳಲ್ಲ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಒಕ್ಕಲಿಗ ವಿರೋಧಿ. ಹೀಗಾಗಿ ಕಾಂಗ್ರೆಸ್ ಗೆ ಒಕ್ಕಲಿಗ ಸಮುದಾಯದ ವೋಟು ಬರಲ್ಲ ಈಗ ಮುಸ್ಲೀಂ  ವೋಟ್ ಪಡೆಯಲು ಯತ್ನಿಸುತ್ತಿದ್ದಾರೆ.  ಮುಸ್ಲೀಂ ವೋಟ್ ಬರೋದು ಡೌಟ್. ಕಾಂಗ್ರೆಸ್ ನವರು ಅಲೆಮಾರಿಗಳಾಗಿದ್ದಾರೆ ಎಂದು ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದರು.

Key words: Congress- candidates, dissent =erupted – MLA- KS Eshwarappa.