ಸದನ ಕರೆದು ಹಣ ದುರುಪಯೋಗ ಮಾಡಬೇಡಿ- ಬಿಜೆಪಿ ಮತ್ತು ಕಾಂಗ್ರೆಸ್ ಗೆ ಹೆಚ್.ಡಿಕೆ ಚಾಟಿ.

Promotion

ಬೆಂಗಳೂರು,ಫೆಬ್ರವರಿ,17,2022(www.justkannada.in):  ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಇಂದು ಸಹ ಕಾಂಗ್ರೆಸ್ ಪ್ರತಿಭಟನೆ ಮುಂದುವರೆಸಿದ ಹಿನ್ನೆಲೆ ಕಲಾಪವನ್ನ ಸೋಮವಾರಕ್ಕೆ ಮುಂದೂಡಲಾಯಿತು.  ಸದನ ಗದ್ದಲವನ್ನುಂಟು ಮಾಡಿದ ಹಿನ್ನೆಲೆ ವಿಪಕ್ಷ ಕಾಂಗ್ರೆಸ್ ಮತ್ತು ಆಡಳಿತರೂಢ ಬಿಜೆಪಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆಯಿಂದ ಸದನದ ಸಮಯ ಹಾಳು ಮಾಡುತ್ತಿದೆ  ವಿಪಕ್ಷ ಮತ್ತು ಸರ್ಕಾರಕ್ಕೆ ತಿಳುವಳಿಕೆ ಮೂಡಿಸಬೇಕು.  ಸದನ ಕರೆದು ಹಣ ದುರುಪಯೋಗ ಮಾಡಬೇಡಿ  ಈ ರೀತಿ ಸದನ ನಡೆಸೋ ಬದಲು ಸದನವನ್ನ ಮುಂದೂಡಿ ಎಂದು ಕಿಡಿಕಾರಿದರು.

ಹಾಗೆಯೇ ನಾನು ಈಶ್ವರಪ್ಪ ಪರ ವಕಾಲತು ವಹಿಸುತ್ತಿಲ್ಲ. ರಾಷ್ಟ್ರಧ್ವಜ ಇಳಿಸುತ್ತೇನೆ ಎಂದು  ಅವರು ಹೇಳಿಲ್ಲ.  ಮುಂದೆ ಕೇಸರಿ ಧ್ವಜ ಹಾರಬಹುದು ಎಂದಿದ್ದಾರೆ ಎಂದು ಹೆಚ್.ಡಿಕೆ ತಿಳಿಸಿದರು.

Key words: congress-bjp-HD kumaraswamy