Saturday, August 8, 2026

BDA Apartments

Home Front Page ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ರಾಜ್ಯಾದ್ಯಂತ ಧರಣಿ- ಡಿ.ಕೆ ಶಿವಕುಮಾರ್.

ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ರಾಜ್ಯಾದ್ಯಂತ ಧರಣಿ- ಡಿ.ಕೆ ಶಿವಕುಮಾರ್.

ಬೆಂಗಳೂರು,ಫೆಬ್ರವರಿ,19,2022(www.justkannada.in):  ಸಚಿವ ಸ್ಥಾನಕ್ಕೆ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡುವಂತೆ ಆಗ್ರಹಿಸಿ  ಸೋಮವಾರ ರಾಜ್ಯಾದ್ಯಂತ ಧರಣಿ ಮಾಡಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ನಮ್ಮ ಕಾರ್ಯಕರ್ತರು ಧರಣಿ ಮಾಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಆದರೆ ಶಿವಮೊಗ್ಗದಲ್ಲಿ ಬಿಜೆಪಿಯ 500 ಜನ ಧರಣಿ ಮಾಡಿದ್ರು. ಆಗ ಕೇಸ್ ಹಾಕಲಿಲ್ಲ. ಮೇಕೆದಾಟು ಪಾದಯಾತ್ರೆ ಮಾಡಿದಾಗಲೂ ಕೇಸ್ ಹಾಕಿದ್ರೂ. ಆದರೆ ಬಿಜೆಪಿಯವರು ಗುಂಪು ಸೇರಿ ಏನೇ ಮಾಡಿದರೂ ಕೇಸ್ ಹಾಕಲ್ಲ. ಕೇಸ್ ಹಾಕುವ ವಿಚಾರದಲ್ಲಿ ಸರ್ಕಾರ ತಾರತಮ್ಯ ತೋರುತ್ತಿದೆ. ಪೊಲೀಸರು ಸರ್ಕಾರದ ಅಣತಿಯಂತೆ ನಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಧರಣಿಯಿಂದ ಕಲಾಪ ಹಾಳು ಎಂಬ ಹೆಚ್.ಡಿ ಕುಮಾರಸ್ವಾಮಿ ಆರೋಪ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಕುಮಾರಸ್ವಾಮಿ ಖುಷಿಯಾಗಿ ಮಾತನಾಡಲಿ ಎಂದರು.

Key words: DK shivakumar-minister -KS Eshwarappa