ಮಂಗಳೂರು ಗಲಭೆಯ ಹಿಂದೆ ಕಾಂಗ್ರೆಸ್ ಕಿಡಿಗೇಡಿಗಳ ಕೈವಾಡ- ಸಚಿವ ಬಿ.ಶ್ರೀರಾಮುಲು ಆರೋಪ…

Promotion

ರಾಯಚೂರು,ಡಿ,24,2019(www.justkannada.in):  ಪೌರತ್ವ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ನಡೆದ ಗಲಭೆಯ ಹಿಂದೆ ಕಾಂಗ್ರೆಸ್ ಕಿಡಿಗೇಡಿಗಳ ಕೈವಾಡವಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.

ರಾಯಚೂರಿನಲ್ಲಿ ಈ ಬಗ್ಗೆ  ಮಾಧ್ಯಮದ ಜತೆ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ಪೊಲೀಸರು ಬಿಡುಗಡೆ ಮಾಡಿರುವ ದೃಶ್ಯಾವಳಿಯಲ್ಲಿ ಗಲಭೆ ಪೂರ್ವ ನಿಯೋಜಿತವಾಗಿ ನಡೆದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕಲ್ಲುಗಳನ್ನು ಜೋಡಿಸಿರುವುದು ಕಾಂಗ್ರೆಸ್ನಲ್ಲಿ ದುಷ್ಟ ಚಟುವಟಿಕೆ ನಡೆಸುವವರು. ನೇರವಾಗಿ ಕಾಂಗ್ರೆಸ್ ಪುಢಾರಿಗಳು ಕಲ್ಲು ತೂರಾಟ ಮಾಡಿ ಗೋಲಿಬಾರ್ ಗೆ ಕಾರಣವಾಗಿದ್ದಾರೆ. ಶಾಂತಿ ಸಂದೇಶ ನೀಡಲು ಬಂದಿಲ್ಲ. ಗಲಭೆ ನಡೆಸಲು ಬಂದಿದ್ದಾರೆ ಎಂದು ಕಿಡಿಕಾರಿದರು.

ಸಿಎಎ  ಜಾರಿ ಮೂಲಕ ಪ್ರಧಾನಿ ಮೋದಿ ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ. ದೇಶ ಸರಿಪಡಿಸಲು ಪೌರತ್ವ ಕಾಯ್ದೆ ತಂದಿದ್ದಾರೆ. ಆ ಕಾಯ್ದೆಯನ್ನ ಜಾರಿ ಮಾಡಲು ನಾವು ಸಿದ್ಧರಿದ್ದೇವೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

Key words:  Congress -behind –Mangalore- riots-Minister- B. Sriramulu