ಬಿಜೆಪಿ ಪಕ್ಷದಲ್ಲಿನ ಗೊಂದಲ ಒಪ್ಪಿಕೊಂಡ ಸಂಸದ ಶ್ರೀನಿವಾಸ್ ಪ್ರಸಾದ್.

Promotion

ಮೈಸೂರು,ಜೂನ್,2,2021(www.justkannada.in): ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲವನ್ನ ಸಂಸದ ಶ್ರೀನಿವಾಸ್ ಪ್ರಸಾದ್ ಒಪ್ಪಿಕೊಂಡಿದ್ದಾರೆ.jk

ಈ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್,  ಸಿ.ಪಿ ಯೋಗೇಶ್ವರ್ ಹೇಳಿಕೆ ಕೊಟ್ಟ ಮೇಲೆ ರಾಜ್ಯ ಬಿಜೆಪಿ ಸ್ವಲ್ಪ ಗೊಂದಲದಲ್ಲಿದೆ. ಮೊದಲು ಯತ್ನಾಳ್ ಹೀಗೆ ಗೊಂದಲ ಮೂಡಿಸಿದರು. ಇದೀಗ ಸಿಪಿ ಯೋಗೇಶ್ವರ್ ಬಂದ ಮೇಲೆ‌ ಈ ಗೊಂದಲ ಶುರುವಾಗಿದೆ. ಹೈಕಮಾಂಡ್ ನಾಯಕತ್ವ ಬದಲಾವಣೆ ವಿಚಾರದಲ್ಲಿ ಚರ್ಚೆ ಬೇಡ ಎಂದಿದ್ದಾರೆ. ಕಟೀಲ್ ಅವರು ಈ ಮಾತನ್ನ ಎಲ್ಲರಿಗು ಹೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ ಎಂದು ತಿಳಿಸಿದರು.

ಹೈಕಮಾಂಡ್ ಮೀಟ್ ಮಾಡೋಕೆ ಎಲ್ಲರೂ ಹೋಗಿದ್ದಾರೆ. ಬಿವೈ ವಿಜಯೇಂದ್ರ, ಸಿಪಿ ಯೋಗೇಶ್ವರ್ ಬಗ್ಗೆ ದೂರು ಕೊಟ್ಟಿದ್ದಾರೆ. ಅದೇ ಥರ ಯೋಗೇಶ್ವರ್ ಸಹ ನಾಯಕರನ್ನ ಭೇಟಿ ಮಾಡಿದ್ದಾರೆ. ನನ್ನನ್ನು ಸಿಟಿ ರವಿ ಭೇಟಿಯಾಗಿದ್ರು. ಸೌದರ್ಹಯುತವಾದ ಭೇಟಿ ಅಷ್ಟೇ ಅಂತ ಅವರೇ ಹೇಳಿದ್ರು. ನಾವು ರಾಜಕಾರಣ ಮಾತನಾಡಿಲ್ಲ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್,  ಶಿಕ್ಷೆ ಕೊಡೋದು ಹೇಳುವಷ್ಟು ಸುಲಭವಲ್ಲ. ತಮ್ಮ ಪ್ರಾಣವನ್ನ ಮುಡುಪಿಟ್ಟು ಕೆಲಸ ಮಾಡ್ತಿದ್ದಾರೆ. ನಾನು ಈಗಾಗಲೇ ಜಿಲ್ಲಾಡಳಿತದ ಜೊತೆ ಮಾಹಿತಿ ಪಡೆದಿದ್ದೇನೆ. ಮೊದಲು ಸರಿಯಾಗಿ ತನಿಖೆ ಪೂರ್ಣಗೊಳ್ಳಲಿ. ಏಕಾಏಕಿ ಶಿಕ್ಷೆ ಕೊಡಬೇಕು ಎನ್ನುವುದು ಸುಲಭವಲ್ಲ. ಅವರಿಗೆಲ್ಲ ಏಕಾಏಕಿ ಜೈಲಿಗೆ ಹಾಕಬೇಕಾ ಶಿಕ್ಷೆ ಎಂದರೆ. ಮೊದಲು ಈ ಬಗ್ಗೆ ತನಿಖೆ ಪೂರ್ಣಗೊಳ್ಳಲಿ ಆನಂತರ ಶಿಕ್ಷೆಯ ಮಾತು ಎಂದು ನುಡಿದರು.

Key words: confusion – BJP- MP-Srinivas Prasad-mysore