ಕೋವಿಡ್ ಸಾಂಕ್ರಾಮಿಕ ಭಾರತೀಯರ ನಗದು ಬಳಸುವ ನಡವಳಿಕೆಯನ್ನು ಬದಲಿಸಿದೆಯೇ? ತಜ್ಞರು ಏನನ್ನುತ್ತಾರೆ ಗೊತ್ತೆ?

ನವದೆಹಲಿ, ಜೂನ್ 2, 2021 (www.justkannada.in): ಭಾರತ ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕದ ಎರಡನೆಯ ಅಲೆಯನ್ನು ಎದುರಿಸುತ್ತಿದೆ. ಕಳೆದ ವರ್ಷ ಮೊದಲನೆ ಅಲೆಯಿಂದಲೇ ನಾವೆಲ್ಲರೂ ಇನ್ನೂ ಸರಿಯಾಗಿ ಚೇತರಿಸಿಕೊಂಡೇ ಇರಲಿಲ್ಲ. ಅಷ್ಟರಲ್ಲಿ ಈಗಾಗಲೇ ಎರಡನೆ ಅಲೆ ಅಂತ್ಯಗೊಳ್ಳುತ್ತಿದ್ದು, ತಜ್ಞರ ಪ್ರಕಾರ ಬಹುಬೇಗನೆ ಮೂರನೆ ಅಲೆ ಅಪ್ಪಳಿಸಬಹುದು ಎನ್ನಲಾಗಿದೆ. ಈ ನಡುವೆ ಈ ಕೋವಿಡ್-19 ಸಾಂಕ್ರಾಮಿಕ ನಮ್ಮೆಲ್ಲರ ಕೆಲಸಗಳು, ವೈಯಕ್ತಿಕ ಜೀವನ ಸೇರಿದಂತೆ ಒಟ್ಟಾರೆ ಜೀವನಶೈಲಿಯನ್ನೇ ಬದಲಾಯಿಸಿಬಿಟ್ಟಿದೆ. ವರ್ಕ್ ಫ್ರಂ ಹೋಂ ಸಂಪ್ರದಾಯ ಬಹುತೇಕ ಎಲ್ಲಾ ಕಡೆಯು ಸಾಧಾರಣವಾಗಿ ಹೋಗಿದೆ.jk

ಈ ಸಾಂಕ್ರಾಮಿಕದಿಂದ ನಮ್ಮೆಲ್ಲರ ದೈನಂದಿನ ಜೀವನದಲ್ಲಿ ಉಂಟಾಗಿರುವ ಮತ್ತೊಂದು ಬಹು ದೊಡ್ಡ ಬದಲಾವಣೆಯೆಂದರೆ ನಾವು ನಗದನ್ನು ಬಳಸುವ ವಿಧಾನ. ಕೋವಿಡ್-19 ಸಾಂಕ್ರಾಮಿಕದಿAದಾಗಿ ನಮ್ಮಲ್ಲಿ ಅನೇಕರು ಎಟಿಎಂ ಯಂತ್ರಗಳಿಂದ ಒಂದೇ ಬಾರಿ ದೊಡ್ಡ ಮೊತ್ತವನ್ನು ವಿತ್‌ ಡ್ರಾ ಮಾಡಿ ಇಟ್ಟುಕೊಂಡೆವು. ಆದರೆ ತಜ್ಞರ ಪ್ರಕಾರ ಹಣ ಪಾವತಿಸಲು ಡಿಜಿಟಲ್ ವಿಧಾನಗಳ ಬಳಕೆಯೂ ಮಹತ್ತರವಾದ ಮಟ್ಟಿಗೆ ಹೆಚ್ಚಾಗಿದೆ.

ಕೋವಿಡ್ ಸಾಂಕ್ರಾಮಿಕದ ಎರಡನೆಯ ಅಲೆಯ ಕ್ರೂರತನವನ್ನು ಗಮನಿಸಿ ಬಹುಪಾಲು ಜನರು ಎಟಿಎಂಗಳಿಗೆ ಮತ್ತೆ ಮತ್ತೆ ಹೋಗಲು ಆಗುವುದಿಲ್ಲ ಎಂದು ಅರಿತು ಅನಿವಾರ್ಯವಾಗಿ ಒಂದೇ ಬಾರಿ ದೊಡ್ಡ ಮೊತ್ತದ ಹಣವನ್ನು ವಿತ್‌ ಡ್ರಾ ಮಾಡಿಕೊಳ್ಳಲು ಆರಂಭಿಸಿದರು. ಹೀಗೆ ವಿತ್‌ ಡ್ರಾ ಮಾಡಿಕೊಂಡಂತಹ ದೊಡ್ಡ ಮೊತ್ತ ತುರ್ತು ಉಪಯೋಗಕ್ಕೆ ಇರಲಿ ಎಂದು ಭಾವಿಸುತ್ತಾರೆ. ಆಗಾಗ ಮಾಡುವ ಅಲ್ಪ ಹಣ ಪಾವತಿಗಳಿಗೆ ಯುಪಿಐ ಹಾಗೂ ಇತರೆ ಡಿಜಿಟಲ್ ವಿಧಾನಗಳಿಗೆ ಮೊರೆ ಹೋಗುತ್ತಿರುವುದು ಡಿಜಿಟಲ್ ವಹಿವಾಟುಗಳ ಪ್ರಮಾಣವನ್ನು ಹೆಚ್ಚಿಸಿದೆ.

ಈ ನಗದು ಬಳಕೆಯ ನಡವಳಿಕೆ ಬದಲಾವಣೆಯ ಕುರಿತು ಮಾತನಾಡುತ್ತಾ ಸರವತ್ರ ಟೆಕ್ನಾಲಜೀಸ್ ಸ್ಥಾಪಕರು ಹಾಗೂ ಎಂಡಿ, ಶ್ರೀ ಮಂದಾರ್ ಅಗಶೆ ಅವರು, ಲಾಕ್‌ಡೌನ್ ಹಾಗೂ ದೈಹಿಕ ಅಂತರದ ನಿಯಮಾವಳಿಗಳಿಂದಾಗಿ ಬಹುಪಾಲು ಜನರು ಆಗಾಗ ಬ್ಯಾಂಕುಗಳು ಹಾಗೂ ಎಟಿಎಂಗಳಿಗೆ ಹೋಗುತ್ತಿಲ್ಲ. ಹಾಗಾಗಿ ಹಣ ವಿತ್‌ಡ್ರಾ ಮಾಡಿಕೊಳ್ಳುವ ಸರಾಸರಿ ಪ್ರಮಾಣ ಶೇ.20ರಷ್ಟು ಹೆಚ್ಚಾಗಿದೆ. ಏಕೆಂದರೆ ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳು ಹಾಗೂ ಇನ್ನಿತರೆ ತುರ್ತು ಸಂದರ್ಭಗಳು ಎದುರಾಗಬಹುದು ಎಂದು ಜನರು ಒಂದೇ ಬಾರಿ ದೊಡ್ಡ ಮೊತ್ತವನ್ನು ವಿತ್‌ಡ್ರಾಕೊಳ್ಳಲು ಬಯಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅವರು ಎಣಿಕೆಯಷ್ಟು ಹಣ ಖರ್ಚಾಗುವುದಿಲ್ಲ.

“ಈ ಹಿಂದೆ ಈ ರೀತಿ ಹಣ ವಿತ್‌ ಡ್ರಾ ಮಾಡಿಕೊಳ್ಳುತ್ತಿದ್ದ ಪ್ರಮಾಣ ರೂ. ೨,೦೦೦-೩,೦೦೦ದಷ್ಟಿತ್ತು. ಆದರೆ ಈಗ ಅದು ಶೇ.೨೦ರಷ್ಟು ಹೆಚ್ಚಾಗಿದೆ, ಅಂದರೆ ಗ್ರಾಮೀಣ ಹಾಗೂ ನಗರ ಭಾಗಗಳೆರಡೂ ಕಡೆ ಸರಾಸರಿ ರೂ.೩,೦೦೦-ರೂ.೪,೦೦೦ಕ್ಕೆ ಏರಿಕೆಯಾಗಿದೆ. ರೂ.೧೦೦೦ದೊಳಗಿನ ವೆಚ್ಚಗಳಿಗೆ ಸಾಮಾನ್ಯವಾಗಿ ಜನರು ಯುಪಿಐ ಪಾವತಿಗಳನ್ನು ಅವಲಂಭಿಸುತ್ತಾರೆ. ಅದೇ ರೀತಿ ಐಎಂಪಿಎಸ್ ಮೂಲಕ ಮಾಡುವ ದೈನಂದಿನ ಸರಾಸರಿ ವಹಿವಾಟುಗಳು ರೂ.೯,೦೦೦ಕ್ಕೆ ಹೆಚ್ಚಿದೆ, ಈ ಹಿಂದೆ ಇದು ರೂ.೬,೦೦೦-ರೂ.೭,೦೦೦ದಷ್ಟಿತ್ತು,” ಎನ್ನುವುದು ಅವರ ಅಭಿಪ್ರಾಯ.

ಒಟ್ಟಾರೆಯಾಗಿ ಕೋವಿಡ್ ಸಾಂಕ್ರಾಮಿಕದ ಎರಡನೆಯ ಅಲೆಯು ನಗದು ನಿರ್ವಹಣೆಯ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರಿದೆ.

ಸಾಮಾನ್ಯ ಜನರಲ್ಲಿನ ಈ ನಗದು ನಿರ್ವಹಣೆಯ ನಡವಳಿಕೆ ಬದಲಾವಣೆ ಭವಿಷ್ಯದಲ್ಲಿ ಇದೇ ರೀತಿ ಮುಂದುವರೆದು ಡಿಜಿಟಲ್ ವಹಿವಾಟುಗಳಿಗೆ ಹೆಚ್ಚು ಅನುಕೂಲವಾಗಲಿದೆ. ಐಎಂಪಿಎಸ್ (Immediate Payment Service) ಅಂದರೆ ಮೊಬೈಲ್ ಫೋನುಗಳ ಮೂಲಕ ತತ್‌ ಕ್ಷಣದ ಎಲೆಕ್ಟ್ರಾನಿಕ್ ಹಣ ವರ್ಗಾಯಿಸುವ ಸೇವೆ. ಆರ್‌ ಬಿಐನ ಇತ್ತೀಚಿನ ದತ್ತಾಂಶದ ಪ್ರಕಾರ ಮೇ 7ರಂದು ಇದ್ದಂತಹ ಔಟ್ ಸ್ಟ್ಯಾಂಡಿಂಗ್ ನಗದು ಪ್ರಸರಣ ರೂ.೨,೯೩೯,೯೯೭ ಕೋಟಿಗಳಷ್ಟಿತ್ತು. ಮಾರ್ಚ್ 26ರಂದು ಇದು ರೂ.೨,೮೫೮,೬೪೦ ಕೋಟಿಗಳಾಗಿತ್ತು.

ಕೇರ್ ರೇಟಿಂಗ್ಸ್ ನ ಮುಖ್ಯ ಆರ್ಥಿಕ ತಜ್ಞ ಮದನ್ ಸಬನವಿಸ್ ಅವರ ಪ್ರಕಾರ, ಈ ಅನಿರ್ಧಿಷ್ಟ ಕಾಲದಲ್ಲಿ ಜನರು ತಮ್ಮ ಬಳಿ ನಗದನ್ನು ಇಟ್ಟುಕೊಳ್ಳಲು ಬಯಸುತ್ತಾರೆ. ಆಸ್ಪತ್ರೆ ವೆಚ್ಚಗಳು ಅಥವಾ ಮತ್ಯಾವುದಾದರೂ ತತ್‌ ಕ್ಷಣಕ್ಕೆ ಬೇಕಾಗುವಂತಹ ವೆಚ್ಚಗಳಿಗೆ ನಗದು ಬಳಿಯಿದ್ದರೆ ಒಳಿತು ಎನ್ನುವುದು ಜನರ ಅಭಿಪ್ರಾಯ, ಎನ್ನುತ್ತಾರೆ.

ಪೇಬೈನಿಯರ್‌ ಬೈನ ಸ್ಥಾಪಕ, ಎಂಡಿ ಹಾಗೂ ಸಿಇಒ ಆನಂದ್ ಕುಮಾರ್ ಬಜಾಜ್ ಅವರ ಪ್ರಕಾರ, “ಲಾಕ್‌ ಡೌನ್‌ಗಳು ಜನರನ್ನು ಆತಂಕಕ್ಕೆ ದೂಡಿದೆ. ವೈದ್ಯಕೀಯ ವೆಚ್ಚಗಳು ಹಾಗೂ ಕಷ್ಟಕಾಲದಲ್ಲಿ ಇತರೆ ಮೂಲಭೂತ ಅಗತ್ಯಗಳಿಗಾಗಿ ಜನರು ಮನೆಯಲ್ಲಿ ನಗದನ್ನು ಹೊಂದಿರಲು ಬಯಸುತ್ತಿದ್ದಾರೆ.”

“ಲಾಕ್‌ ಡೌನ್‌ನಿಂದಾಗಿ ಅತೀವ ಸಂಕಷ್ಟಕ್ಕೆ ಸಿಲುಕಿರುವಂತಹ ಕಾರ್ಮಿಕ ವರ್ಗದವರು, ಅಂದರೆ ವಲಸೆ ಕಾರ್ಮಿಕರು ಹಾಗೂ ಇತರೆ ಕಡಿಮೆ ಆದಾಯವಿರುವ ಸಮೂಹಗಳಿಗೆ ಪರಿಹಾರ ಒದಗಿಸಲು ಮುಂದಾಗಿರುವ ಸರ್ಕಾರವು ಪ್ರಧಾನ ಮಂತ್ರಿ ಜನ್‌ ಧನ್ ಯೋಜನೆಯಡಿ (ಪಿಎಂಜೆಡಿವೈ), ನೇರ ಲಾಭ ವರ್ಗಾವಣೆ (direct benefit transfer) ವಿಧಾನದ ಮೂಲಕ ಲಕ್ಷಾಂತರ ಕಾರ್ಮಿಕರಿಗೆ ಪರಿಹಾರ ಹಣವನ್ನು ವಿತರಿಸಿದೆ. ನಾಗರೀಕರಿಗೆ ಡಿಬಿಟಿ ಹಂಚಿಕೆಗಾಗಿ ಒಂದು ಬಹಳ ಮುಖ್ಯವಾದ ವಿಧಾನವಾದ ‘ಆಧಾರ್ ಎಟಿಎಂ’ನ ಬಳಕೆ ಈ ಸಮಯದಲ್ಲಿ ಬಹಳ ದೊಡ್ಡ ಪ್ರಮಾಣದ ಏರಿಕೆ ಕಂಡಿದೆ. ಈ ವರ್ಗದ ಜನರು ನಗದು ಪಡೆಯಲು ಹತ್ತಿರದ ಚಿಲ್ಲರೆ ಅಂಗಡಿಗಳಿಗೆ ಹೋಗಿ ಹಣ ಪಡೆಯಲಾರಂಭಿಸಿದ್ದಾರೆ. ಈ ವ್ಯವಸ್ಥೆಯನ್ನು ಮೊದಲಿಗೆ ಗ್ರಾಮೀಣ ಹಾಗೂ ಚಿಕ್ಕ ಪಟ್ಟಣಗಳಲ್ಲಿ ಅಳವಡಿಸಲಾಯಿತು, ನಂತರ 2ನೇ ಶ್ರೇಣಿ ನಗರಗಳಿಗೆ ವಿಸ್ತರಿಸಲಾಯಿತು,” ಎನ್ನುತ್ತಾರೆ ಬಜಾಜ್.

ಎಇಪಿಎಸ್ (Aadhaar-enabled Payment Syste), ಆಧಾರ್ ಕಾರ್ಡ್ ನೀಡಿ ಹತ್ತಿರದ ಯಾವುದಾದರೂ ನೋಂದಾಯಿತ ಅಂಗಡಿಗಳಲ್ಲಿ ಬೆರಳಚ್ಚನ್ನು ನೀಡಿ ಹಣ ಪಡೆಯುವ ವಿಧಾನವಾಗಿದೆ. 2021ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಈ ವಿಧಾನದ ಮೂಲಕ ಪಡೆದುಕೊಂಡAತಹ ಹಣದ ಮೊತ್ತ ರೂ.೧೦,೦೦೦ ಕೋಟಿಗಳಾಗಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ ಈ ಮೊತ್ತ ರೂ.೭,೬೫೦ರಷ್ಟಿತ್ತು.

“ಹಾಗಾಗಿ, ಡಿಬಿಟಿ ನಿಧಿ ವಿತ್‌ ಡ್ರಾಯಲ್‌ ಗಳೂ ಸಹ ಅತೀ ಹೆಚ್ಚಿನ ನಗದು ಚಲಾವಣೆಯ ಹಿಂದಿರುವ ಬಹಳ ಮಹತ್ತರವಾದ ಕಾರಣ ಎಂದು ಪರಿಗಣಿಸಬಹುದು, ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಆರ್ಥಿಕತೆಯಲ್ಲಿ,” ಎನ್ನುತ್ತಾರೆ. ಇದೆಲ್ಲದರ ಜೊತೆಗೆ ಆಸ್ಪತ್ರೆಗಳಲ್ಲಿಯೂ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗಳ ನಕಲು ಪ್ರತಿಗಳನ್ನು ಪಡೆದುಕೊಂಡು ರೂ.2 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಡೆದುಕೊಳ್ಳಲು ಅನುಮತಿಸಲಾಗಿದೆ.

“ಇಂತಹ ಸಂದರ್ಭದಲ್ಲಿ, ಜನರು ತಮ್ಮ ಬಳಿ ಹೆಚ್ಚು ನಗದನ್ನು ಹೊಂದಿರಲು ಬಯಸುತ್ತಾರೆ ಹಾಗೂ ಹಣ ಪಾವತಿಗೆ ಬ್ಯಾಂಕಿಂಗ್ ಚಾನೆಲ್‌ ಗಳನ್ನು ಸಾಧ್ಯವಾದಷ್ಟು ತಪ್ಪಿಸಲು ಬಯಸುತ್ತಾರೆ. ಒಂದು ವೇಳೆ ಇ-ವಾಣಿಜ್ಯ ಸಂಸ್ಥೆಗಳು ‘ಕ್ಯಾಶ್ ಆನ್ ಡೆಲಿವರಿ’ ವಿಧಾನವನ್ನು ಸಾಮಾನ್ಯವಾಗಿ ಒಪ್ಪಿಕೊಂಡರೆ ನಗದು ಬಳಕೆಯ ಪ್ರಮಾಣ ಇನ್ನೂ ಅಧಿಕವಾಗುತಿತ್ತು,” ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಮೂಲ : ಪಿಟಿಐ ಸುದ್ದಿ

Key words: covid- pandemic –change- Indians’ -cash-using  -experts