ಸ್ಯಾಂಡಲ್ ವುಡ್ ನಟ ಆದಿತ್ಯ ವಿರುದ್ದ ದೂರು…        

Promotion

ಬೆಂಗಳೂರು,ಮೇ,10,2019(www.justkannada.in):  ಮನೆ ಬಾಡಿಗೆ ಕಟ್ಟದೆ ಸತಾಯಿಸುತ್ತಿದ್ದ ಆರೋಪದ ಮೇಲೆ ಡೆಡ್ಲಿಸೋಮಾ ಸಿನಿಮಾ ಖ್ಯಾತಿಯ ಸ್ಯಾಂಡಲ್ ವುಡ್ ನಟ ಆದಿತ್ಯ ವಿರುದ್ದ  ದೂರು ನೀಡಲಾಗಿದೆ.

ಮನೆ ಮಾಲೀಕ ಪ್ರಸನ್ನ ಕುಮಾರ್ ಎಂಬುವವರು ದೂರು ನೀಡಿದ್ದಾರೆ. ಸದಾಶಿವನಗರದ ಆರ್ ಎಂವಿ ಎಕ್ಸ್ ಟೆನ್ಷನ್ ಬಳಿ ಇರುವ ನಿವಾಸವನ್ನ ಪ್ರಸನ್ನ ಕುಮಾರ್  ನಟ ಆದಿತ್ಯ ಅವರಿಗೆ ಬಾಡಿಗೆಗೆ ಕೊಟ್ಟಿದ್ದರು. ಇಲ್ಲಿ ನಟ ಆದಿತ್ಯ ರಾಜೇಂದ್ರ ಸಿಂಗ್ ಬಾಬು, ತಾಯಿ ಮತ್ತು ತಂಗಿ  ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿದ್ದರು.

ಈ ನಡುವೆ ನಟ ಆದಿತ್ಯ ವಿರುದ್ದ ಕಳೆದ ಏಳು ತಿಂಗಳಿನಿಂದ ಮನೆ ಬಾಡಿಗೆ ಕಟ್ಟದ ಆರೋಪ ಕೇಳಿ ಬಂದಿದೆ. ಸುಮಾರು 2 ಲಕ್ಷದ 80 ಸಾವಿರ ರೂ ಮನೆ ಬಾಡಿಗೆಯನ್ನ ಬಾಕಿ ಉಳಿಸಿಕೊಂಡು ಹಣ ನೀಡದೆ ಸತಾಯಿಸುತ್ತಿದ್ದರು ಎಂದು ಮನೆ ಮಾಲೀಕ ಪ್ರಸನ್ನ ಕುಮಾರ್ ಆರೋಪಿಸಿ ದೂರು ನೀಡಿದ್ದಾರೆ.

ಕಳೆದ ನವೆಂಬರ್ ನಲ್ಲಿ ನಟ ಆದಿತ್ಯ ವಿರುದ್ದ ಪ್ರಸನ್ನ ಕುಮಾರ್ ಸಿಟಿಸಿವಿಲ್ ಕೋರ್ಟ್ ನಲ್ಲಿ ಎವಿಕ್ಷನ್ ಕೇಸ್ ದಾಖಲಿಸಿದ್ದರು. ಇದೀಗ ಇಂದು ಮನೆ ಖಾಲಿ ಮಾಡಿಸಿಕೊಡುವಂತೆ ದೂರು ನೀಡಿದ್ದಾರೆ.

ನಟ ಆದಿತ್ಯ ಸ್ಪಷ್ಟನೆ…

ಇನ್ನು ತಮ್ಮ ವಿರುದ್ದ ಕೇಳಿ ಬಂದಿರುವ ಆರೋಪ ಕುರಿತು ಪ್ರತಿಕ್ರಿಯಿಸಿರುವ ನಟ ಆದಿತ್ಯ ಅವರು, ಈ ಬಗ್ಗೆ ಕೋರ್ಟ್ ನಲ್ಲಿ ಕೇಸ್ ಇರುವುದರಿಂದ ನಾನು ಏನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

Key words: Complaint- against –Sandalwood- actor- Aditya