ಹೈಕಮಾಂಡ್ ಹೇಳಿದರೆ ಕೋಲಾರದಿಂದ ಸ್ಪರ್ಧೆ- ಸಚಿವ ಮುನಿರತ್ನ.

Promotion

ಬೆಂಗಳೂರು,ಫೆಬ್ರವರಿ,20,2023(www.justkannada.in):  ಕೋಲಾರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಮಾಜಿ ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದ್ದು ಇದೀಗ ಬಿಜೆಪಿಯಿಂದ ಕೋಲಾರದಲ್ಲಿ ಕಣ್ಣಕ್ಕಿಳಿಯುವ  ಬಗ್ಗೆ ಮಾತನ್ನಾಡಿದ್ದಾರೆ ತೋಟಗಾರಿಕೆ ಸಚಿವ ಮುನಿರತ್ನ.

ಹೌದು , ಈ ಕುರಿತು ಮಾತನಾಡಿರುವ ಸಚಿವ ಮುನಿರತ್ನ, ಹೈಕಮಾಂಡ್ ಹೇಳಿದರೆ ಕೋಲಾರದಿಂದ ಸ್ಪರ್ಧೆ  ಮಾಡುತ್ತೇನೆ. ಪಕ್ಷ ಹೇಳಿದ ಕಡೆ ನಾನು ಸ್ಪರ್ಧೆ ಮಾಡುತ್ತೇನೆ. ನನಗೆ ಪಕ್ಷ ದೊಡ್ಡದು ಪಕ್ಷದ ಸೂಚನೆ ಪಾಲಿಸುತ್ತೇನೆ.  ಕೋಲಾರಕ್ಕೆ ಹೋಗು ಅಂದರೇ ಹೋಗುತ್ತೇನೆ. ಇಲ್ಲ ಬೇರೆ ಕ್ಷೇತ್ರಕ್ಕೆ  ಹೋಗು ಅಂದರೂ ಹೋಗುತ್ತೇನೆ ಎಂದು ತಿಳಿಸಿದ್ದಾರೆ.

Key words: Compet- Kolar – High Command- says – Minister -Muniratna.