ಕಾಮನ್’ವೆಲ್ತ್ ಗೇಮ್ಸ್: ಪ್ಯಾರಾ ಪವರ್’ಲಿಫ್ಟಿಂಗ್’ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಸುಧೀರ್

Promotion

ಬೆಂಗಳೂರು, ಆಗಸ್ಟ್ 05, 2022 (www.justkannada.in): ಕಾಮನ್‌ವೆಲ್ತ್ ಗೇಮ್ಸ್​ನ ಪ್ಯಾರಾ ಪವರ್‌’ಲಿಫ್ಟಿಂಗ್‌ನಲ್ಲಿ ಸುಧೀರ್ ಚಿನ್ನ ಗೆದ್ದಿದ್ದಾರೆ.

ಸುಧೀರ್ ಅವರು 134.5 ಅಂಕಗಳನ್ನು ಗಳಿಸುವ ಮೂಲಕ ಅಗ್ರಸ್ಥಾನ ಪಡೆದು ಚಿನ್ನಕ್ಕೆ ಕೊರಳೊಡ್ಡಿದರು. ಈ ಮೂಲಕ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ದಾಖಲೆ ಬರೆದಿದರು.

ಇಕೆಚುಕ್ವು ಕ್ರಿಶ್ಚಿಯನ್ ಒಬಿಚುಕ್ವು ಒಟ್ಟು 133.6 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ಮಿಕ್ಕಿ ಯೂಲ್ ಒಟ್ಟು 130.9 ಅಂಕಗಳೊಂದಿಗೆ ಕಂಚಿ ಪದಕ ಗಳಿಸಿದರು.

2013 ರಲ್ಲಿ, ಸುಧೀರ್ ಸೋನಿಪತ್‌ನಲ್ಲಿ ಪವರ್‌ಲಿಫ್ಟಿಂಗ್‌ ಪ್ರಾರಂಭಿಸಿದರು. ಅಂದಿನಿಂದ ಮುನ್ನೆಡೆಯುತ್ತಿದ್ದಾರೆ.

ಚಿನ್ನ ಗೆದ್ದ ಸುಧೀರ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ. ಈ ಕುರಿತಂತೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿಯವರು, ಸುಧೀರ್ ಅವರಿಂದ ಕಾಮನ್​ವೆಲ್ತ್​ ಗೇಮ್ಸ್​​​ನ ಪ್ಯಾರಾ-ಸ್ಪೋರ್ಟ್ಸ್ ಪದಕಗಳ ಎಣಿಕೆಗೆ ಉತ್ತಮ ಆರಂಭವಾಗಿದೆ ಎಂದು ಬಣ್ಣಿಸಿದ್ದಾರೆ.