ಪತ್ನಿ ಮತ್ತು ಮೂವರು ಮಕ್ಕಳಿಗೆ ವಿಷ ಕುಡಿಸಿ ಬಳಿಕ ತಾನೂ ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆಗೆ ಶರಣು

Promotion

ಚೆನ್ನೈ,ಡಿ,13,2019(www.justkannada.in):  ಒಂದಂಕಿ ಲಾಟರಿಗೆ ಒಂದೇ ಕುಟುಂಬದ ಐವರು ಬಲಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡು ವಿಲ್ಲುಪುರಂನಲ್ಲಿ ಈ ಘಟನೆ ನಡೆದಿದೆ. ಅರುಳ್ ಎಂಬಾತ ತನ್ನ ಪತ್ನಿ ಮತ್ತು ಮೂವರು ಮಕ್ಕಳಿಗೆ ವಿಷ ಕುಡಿಸಿ ಬಳಿಕ ತಾನೂ ಸಹ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆಗೆ ಕಾರಣವೇನು…

ಸಿಂಗಲ್ ನಂಬರ್ ಲಾಟರಿ ಕೇರಳ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದು, ತಮಿಳುನಾಡಿನಲ್ಲಿದ್ದ ಅರುಳ್ ಒಂದಂಕಿ ಲಾಟರಿಗೆ ಗೀಳಿಗೆ ಬಿದ್ದಿದ್ದ. ಈ ನಡುವೆ ಲಾಟರಿ ಟಿಕೆಟ್ ಖರೀದಿಸಲು ಸಾಲಮಾಡಿಕೊಂಡಿದ್ದ ಎನ್ನಲಾಗಿದೆ.  ತನ್ನ ಮನೆ ಮಾರಿದರೂ ಸಾಲ ತೀರದ ಹಿನ್ನೆಲೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಹೀಗಾಗಿ ಸಲಗಾರರ ಕಾಟ ತಾಳಲಾರದೆ ಪತ್ನಿ ಮತ್ತು ಮೂವರಿಗೆ ವಿಷ ಕುಡಿಸಿದ್ದು ಬಳಿಕ ತಾನೂ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

key words:  commits suicide -after -wife -poison – three children-person