Saturday, October 10, 2026

BDA Apartments

Increase in COVID cases: DC’s village stay program with held BDA JK_Adv BDA Adv
Home Front Page ಡಿ.22ರ ಬಳಿಕ ಸಂಪುಟ ವಿಸ್ತರಣೆ: ಮಾತು ಕೊಟ್ಟಂತೆ ಗೆದ್ದ ಎಲ್ಲರಿಗೂ ಮಂತ್ರಿಗಿರಿ- ಸಿಎಂ ಬಿಎಸ್ ಯಡಿಯೂರಪ್ಪ...

ಡಿ.22ರ ಬಳಿಕ ಸಂಪುಟ ವಿಸ್ತರಣೆ: ಮಾತು ಕೊಟ್ಟಂತೆ ಗೆದ್ದ ಎಲ್ಲರಿಗೂ ಮಂತ್ರಿಗಿರಿ- ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ..

ಬೆಂಗಳೂರು,ಡಿ,13,2019(www.justkannada.in): ಡಿಸೆಂಬರ್ 22ರ ಬಳಿಕ ಸಚಿವ ಸಂಪುಟ ವಿಸ್ತರಣೆ  ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ,  ಮಾತು ಕೊಟ್ಟಿರುವಂತೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ನೂತನ ಶಾಸಕರಿಗೆ ಸಚಿವ ಸ್ಥಾನ ನೀಡಿವುದು ನಿಶ್ಚಿತ. ಒಂದು ವಾರದ ಬಳಿಕ ನವದೆಹಲಿಗೆ ತೆರಳುತ್ತೇನೆ. ಈ ವೇಳೆ, ಸಂಪುಟ ವಿಸ್ತರಣೆ ಕುರಿತಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದು ತಿಳಿಸಿದರು.

ಸದ್ಯ ಅಮಿತ್ ಶಾ ಅವರು ಜಾರ್ಖಂಡ್ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ  ಕಾರಣ ಅಮಿತ್ ಶಾ ಅವರ ಭೇಟಿ ಸಾಧ್ಯವಾಗಿಲ್ಲ. ಹೀಗಾಗಿ ಒಂದು ವಾರದ ಬಳಿಕ ದೆಹಲಿಗೆ ತೆರಳುತ್ತೇನೆ. ಡಿಸೆಂಬರ್ 22ರ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ  ತಿಳಿಸಿದರು.

Key words: cabinet expansion -after Dec 22-CM BS Yeddyurappa -clarified.