ಮಾಸ್ಕ್ ಧರಿಸದೇ ಆಸ್ಪತ್ರೆಗೆ ಬಂದರೆ 500 ರೂ. ದಂಡ

Promotion

ಚಾಮರಾಜನಗರ, ಅಕ್ಟೊಂಬರ್,07,2020(www.justkannada.in) : ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ಜಿಲ್ಲಾಸ್ಪತ್ರೆಗೆ ಮಾಸ್ಕ್ ಧರಿಸದೇ ಬರುವವರಿಗೆ ದಂಡ ವಿಧಿಸಲಾಗುತ್ತಿದೆ.jk-logo-justkannada-logoಸರ್ಕಾರವು ಮಾಸ್ಕ್ ಕಡ್ಡಾಯಗೊಳಿಸಿದೆ. ಆದರೂ, ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರು ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೆಲವರು ಮಾಸ್ಕ್ ಅನ್ನು ಬೇಕಾಬಿಟ್ಟಿ ಧರಿಸುತ್ತಿರುವುದರಿಂದ ಪೊಲೀಸ್ ಇಲಾಖೆ ನೆರವು ಪಡೆದು, ದಂಡ ಪ್ರಯೋಗಕ್ಕೆ ಮುಂದಾಗಿರುವುದಾಗಿ ಜಿಲ್ಲಾ ಸರ್ಜನ್ ಡಾ.ಮುರುಳಿಕೃಷ್ಣ  ತಿಳಿಸಿದ್ದಾರೆ.

ಮುನ್ನೆಚ್ಚರಿಕೆಗಿಂತ ಕೋವಿಡ್​ಗೆ ಮದ್ದಿಲ್ಲ. ಕೊರೊನಾ ತೀವ್ರತೆ ಹೆಚ್ಚಾಗುತ್ತಿದೆ.  500 ರೂ. ದಂಡ ಕಟ್ಟುವುದಕ್ಕಿಂತ ಮಾಸ್ಕ್ ಧರಿಸಿಯೇ ಆಸ್ಪತ್ರೆಗೆ ಬರಬೇಕು. ಈಗ ಸೋಂಕು ಕಾಣಿಸಿಕೊಂಡು ನೇರ ಐಸಿಯುಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಪಿಡಿಗೆ ಭೇಟಿ ನೀಡುವವರಿಗೂ ಕೊರೊನಾ ಟೆಸ್ಟ್

ಜಿಲ್ಲಾಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಬರುವವರಿಗೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಲಾಗುತ್ತಿದೆ. ಜ್ವರ, ನೆಗಡಿ ಹಾಗೂ ಇತರೆ ರೋಗಗಳಿಗೆ ತಪಾಸಣೆಗೆ ಬಂದವರಿಗೆ ಕೋವಿಡ್ ಟೆಸ್ಟ್‌ ಮಾಡಲಾಗುತ್ತಿದೆ.

key words : come-hospital-without-wearing-mask-500-Fine