ರಾಜ್ಯದ ಎಷ್ಟು ಆಸ್ಪತ್ರೆಗಳಲ್ಲಿ ಬೆಡ್ ಇದೆ ನೋಡೋಣ ಬನ್ನಿ- ಸರ್ಕಾರಕ್ಕೆ ಡಿ.ಕೆ ಶಿವಕುಮಾರ್ ಸವಾಲು…

ಬೆಂಗಳೂರು,ಏಪ್ರಿಲ್,20,2021(www.justkannada.in): ರಾಜ್ಯದಲ್ಲಿ ಕೊರೋನಾ 2ನೇ ಅಲೆ ಹೆಚ್ಚಾಗಿದ್ದು ಈ ಮಧ್ಯೆ ಬೆಡ್ ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಸವಾಲು ಹಾಕಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜ್ಯದ ಎಷ್ಟು ಆಸ್ಪತ್ರೆಗಳಲ್ಲಿ ಬೆಡ್ ಇದೆ ನೋಡೋಣ ಬನ್ನಿ ಎಂದಿದ್ದಾರೆ.jk

ಈ ಕುರಿತು ಇಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ನಾನು ರಿಯಾಲಿಟಿ ಚೆಕ್ ಮಾಡಲು ಬರುತ್ತೇನೆ. ರಾಜ್ಯದ ಎಷ್ಟು ಆಸ್ಪತ್ರೆಗಳಲ್ಲಿ ಬೆಡ್ ಇದೆ ನೋಡೋಣ ಬನ್ನಿ. ಸಚಿವರು ದಿನನಿತ್ಯ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು. ಸೂಕ್ತ ಕ್ರಮ ಕೈಗೊಂಡಿದ್ದರೇ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.Come -see -how many -hospitals - state – bed-kpcc president-DK Shivakumar- challenges

ರಾಜ್ಯದಲ್ಲಿ ಲಾಕ್ ಡೌನ್ ಮಾಡೋದು ಬೇಡ. ಕಳೆದ ಬಾರಿ ಲಾಕ್ ಡೌನ್ ಮಾಡಿದಾಗ ಜನರಿಗೆ ಏನು ಮಾಡಿದ್ರಿ. ಈಗ ಲಾಕ್ ಡೌನ್ ಮಾಡಿದರೇ ಜನರಿಗೆ ಏನು ನೆರವು ನೀಡುತ್ತೀರಿ. ಫುಡ್ ಕಿಟ್ ಕೊಡ್ತೀರಾ..? ಅಥವಾ ಆರ್ಥಿಕ ಸಹಾಯ ಮಾಡ್ತೀರಾ..? ರಾಜ್ಯಸರ್ಕಾರ ಯಾವ ರೀತಿ ಸಿದ್ಧತೆ ಮಾಡಿಕೊಂಡಿದೆ ಎಂದು ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು.

Key words: Come -see -how many -hospitals – state – bed-kpcc president-DK Shivakumar- challenges