ರೊನಾಲ್ಡೊ ಮಾಡಿದ ಚಿಕ್ಕ ಸನ್ನೆ ಕೊಕಾಕೋಲಾಗೆ ತಂದಿಟ್ಟ ನಷ್ಟ 29 ಸಾವಿರ ಕೋಟಿ!

Promotion

ಬೆಂಗಳೂರು, ಜೂನ್ 17, 2021 (www.justkannada.in): ಕೊಕಾಕೋಲಾ ಸಂಸ್ಥೆ ರೊನಾಲ್ಡೊರಿಂದ ಸಾವಿರಾರು ಕೋಟಿ ನಷ್ಟ ಅನುಭವಿಸಿದೆ!

ಹೌದು. ರೊನಾಲ್ಡೊ ಮಾಡಿದ ಸನ್ನೆಯೊಂದು ಕೊಕಾಕೋಲಾ ಸಂಸ್ಥೆಗೆ ಸಾವಿರಾರು ಕೋಟಿ ರೂ. ನಷ್ಟ ತಂದಿಟ್ಟಿದೆ.

ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಪತ್ರಿಕಾಗೋಷ್ಠಿ ಮುಗಿಯುವಷ್ಟರಲ್ಲಿ ಕಂಪನಿಯ 1 ಷೇರಿನ ಬೆಲೆ 56.10 ಡಾಲರ್ ನಿಂದ 55.22 ಡಾಲರ್ ಗೆ ಕುಸಿದಿದೆ.

ರೊನಾಲ್ಡೊರ ಈ ಕೆಲಸ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರ್ಬೋನೇಟ್ ಅಂಶವಿರುವ ಪಾನೀಯಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದಕ್ಕಾಗಿಯೇ ರೊನಾಲ್ಡೋ ಈ ರೀತಿ ಸನ್ನೆ ಮಾಡಿದ್ದರು.