ಸಲ್ಮಾನ್ ಭಾಯ್ ಭೇಟಿ ಮಾಡಿದ ಸಿಎಂ ಪುತ್ರ ವಿಜಯೇಂದ್ರ !

Promotion

ಬೆಂಗಳೂರು, ಡಿಸೆಂಬರ್ 18, 2019 (www.justkannada.in): ಬೆಂಗಳೂರಿಗೆ ಬಂದಿದ್ದ ಸಲ್ಮಾನ್ ಖಾನ್ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿಜೆಪಿ ಯುವ ನಾಯಕ ಬಿ.ವೈ. ವಿಜಯೇಂದ್ರ ಭೇಟಿ ಮಾಡಿದ್ದಾರೆ.

ದಬಾಂಗ್ 3 ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ  ವಿಜಯೇಂದ್ರ ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ.

ಇನ್ನು ಚಿತ್ರದ ಪ್ರಚಾರಾರ್ಥ ಬೆಂಗಳೂರಿಗೆ ಸಲ್ಮಾನ್ ಖಾನ್, ಸುದೀಪ್, ಸೋನಾಕ್ಷಿ ಸಿನ್ಹಾ, ಸಾಯಿ ಮಂಜ್ರೇಕರ್, ನಿರ್ದೇಶಕ ಪ್ರಭುದೇವ ಹಾಗೂ ಚಿತ್ರತಂಡದವರು ಭಾಗವಹಿಸಿದ್ದು ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದ್ದಾರೆ.

ಇದೇ ವೇಳೆ ಸಲ್ಮಾನ್ ಖಾನ್ ಕನ್ನಡದಲ್ಲಿ ಡೈಲಾಗ್ ಹೇಳಿದ್ದಾರೆ. ಸುದೀಪ್ ನನ್ನ ಸಹೋದರ. ನಿಜವಾದ ಸೂಪರ್ ಸ್ಟಾರ್ ‘ದಬಾಂಗ್ 3’ ಸುದೀಪ್ ಸಿನಿಮಾ ಆಗಿದೆ ಎಂದು ಹೇಳಿದ್ದಾರೆ.