ಸಿದ್ದು ತವರಿನ ಪ್ರತಿಭಟನೆ ಬಿಸಿಗೆ ಬೆದರಿದ ಸಿಎಂ! ಮೈಸೂರು ಪ್ರವಾಸ ರದ್ದು

Promotion

ಮೈಸೂರು, ಆಗಸ್ಟ್ 21, 2022 (www.justkannada.in): ಮಾಜಿ ಸಿಎಂ ಸಿದ್ದು ತವರೂರಿಗೆ ಆಗಮಿಸಲು ಸಿಎಂ ಹಿಂದೇಟು ಹಾಕಿದ್ದು ಮೈಸೂರಿನಲ್ಲಿ ಪ್ರತಿಭಟನೆಯ ಬಿಸಿ ಹಿನ್ನೆಲೆ.ಮೈಸೂರು ಪ್ರವಾಸ ರದ್ದು ಮಾಡಿಕೊಂಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಮೈಸೂರು ಜಿಲ್ಲೆಯ ಮೂಗೂರು ದೇವಾಲಯಕ್ಕೆ ಆಗಮಿಸಬೇಕಿತ್ತು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ ಗೆ ಮೊಟ್ಟೆ ಹೊಡೆದ ಪರಿಣಾಮ ಎಲ್ಲೆಡೆ ಪ್ರತಿಭಟನೆಯ ಬಿಸಿ ಹೆಚ್ಚಾಗಿದೆ.

ಮೈಸೂರು ಸಿದ್ದರಾಮಯ್ಯ ತವರೂರು ಆದ ಕಾರಣ ಸಿಎಂ ಮೈಸೂರಿಗೆ ಆಗಮಿಸಿದರೆ ಪರಿಸ್ಥಿತಿ ಮತ್ತಷ್ಟು ಬಿಗುಡಾಯಿಸುವ ಸಾಧ್ಯತೆ. ಇದನ್ನರಿತು ಸಿಎಂ ಬೊಮ್ಮಾಯಿ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎನ್ನಲಾಗುತ್ತಿದೆ.

ಮೈಸೂರು ಬದಲು ಹಾವೇರಿ, ಧಾರವಾಡ ಜಿಲ್ಲಾ ಪ್ರವಾಸವನ್ನು ಸಿಎಂ ಕೈಗೊಂಡಿದ್ದಾರೆ. ನೆನ್ನೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಪ್ಪು ಪಟ್ಟಿ ತೋರಿಸಲು ಮುನ್ನುಗ್ಗಿದ್ದ ಕಾಂಗ್ರೆಸ್ ಕಾರ್ಯಕರ್ತರು. ಈ ಹಿನ್ನೆಲೆ ಮೈಸೂರಿಗೆ ಆಗಮಿಸಲು ಸಿಎಂ ಹಿಂದೇಟು ಹಾಕಿದ್ದಾರೆ.