ಸಿದ್ಧಗಂಗಾ ಮಠಕ್ಕೆ ತಡೆಹಿಡಿದಿದ್ದ ಅನುದಾನ ಮುಂದುವರಿಸಲು ಸಿಎಂ ಸಿದ‍್ಧರಾಮಯ್ಯ ಸೂಚನೆ

Promotion

ಬೆಂಗಳೂರು,ಜೂನ್,1,2023(www.justkannada.in): ತುಮಕೂರಿನ ಸಿದ್ಧಗಂಗಾ ಮಠಕ್ಕೆ ಅನುದಾನ ತಡೆಹಿಡಿದಿದ್ದ ಅನುದಾನ ಮುಂದುವರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದಿನ ಸರ್ಕಾರದ ಕಾಮಗಾರಿ, ಅನುದಾನಕ್ಕೆ ತಡೆಹಿಡಿಯಲಾಗಿತ್ತು. ಇದೀಗ ಸಿದ್ಧಗಂಗಾ ಮಠದ ವಸತಿ ನಿಲಯದ ಟೆಂಡರ್ ಮುಂದುವರಿಸಲು, ತಡೆಹಿಡಿದಿದ್ದ 9.90 ಕೋಟಿ ಅನುದಾನ ಮುಂದುವರಿಸಲು ಲೋಕೋಪಯೋಗಿ ಇಲಾಖೆಗೆ ಸಿಎಂ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Key words: CM Siddaramaiah -continue – withheld- grant – Siddhaganga Mutt