ಬಿಜೆಪಿ ಶಾಸಕರ ಕ್ಷೇತ್ರದಲ್ಲೂ ಸಿಎಂ ಗ್ರಾಮವಾಸ್ತವ್ಯ – ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ…

Promotion

ಬೆಂಗಳೂರು,ಜೂ,27,2019(www.justkannada.in):  ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ಶಾಸಕರ ಕ್ಷೇತ್ರದಲ್ಲೂ ಗ್ರಾಮವಾಸ್ತವ್ಯ ಮಾಡಲಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ  ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು,  ನಿನ್ನೆ ಗ್ರಾಮವಾಸ್ತವ್ಯಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ತೆರಳುತ್ತಿದ್ದ ವೇಳೆ ಶಾಸಕರೊಬ್ಬರು ಅಡ್ಡಿಪಡಿಸಿದ್ದಾರೆ. ನಮ್ಮ ಪಕ್ಷದಲ್ಲೇ ಇದ್ದು  ಬಿಜೆಪಿಗೆ ಹೋಗಿರುವ ಶಾಸಕರೇ ಅಡ್ಡಿಪಡಿಸಿದ್ದಾರೆ. ಬಿಜೆಪಿಯವರಿಗೆ ಜನರರೇ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಇನ್ನು ಕಾಂಗ್ರೆಸ್ ಸಚಿವರು ಸಹ ಗ್ರಾಮವಾಸ್ತವ್ಯ ಮಾಡಿದರೇ ಉತ್ತಮ ಕಾರ್ಯವಾಗುತ್ತದೆ ಎಂದು ಹೆಚ್.ಡಿ ದೇವೇಗೌಡರು ಸಲಹೆ ನೀಡಿದರು.

Keywords: CM- Gramvastavya- also – BJP MLA-Former Prime Minister- HD Deve Gowda.