ಮಗಳ ಮದುವೆ ತಡೆಯಲು ಅಣ್ಣನನ್ನೇ ಕೊಂದ ತಂಗಿ: ನಾಲ್ವರು ಆರೋಪಿಗಳ ಬಂಧನ

ಬೆಂಗಳೂರು:ಜೂ-27:(www.justkannada.in) ಮಗಳ ಮದುವೆ ನಿಲ್ಲಿಸಲು ಸ್ವಂತ ಅಣ್ಣನನ್ನೆ ಸುಪಾರಿ ಕೊಟ್ಟು ತಂಗಿಯೆ ಕೊಲೆ ಮಾಡಿಸಿದ ಘಟನೆ ಬೆಂಗಳೂರಿನ ಕೆಂಗೇರಿ ಬಳಿ ನಡೆದಿದೆ.

ರಾಜಶೇಖರ್ ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಶೇಖರ್ ತಂಗಿ ಗೌರಮ್ಮ ಸೇರಿದಂತೆ ನಾಲ್ವರು ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ರಾಜಶೇಖರ್ ತನ್ನ ತಂಗಿ ಗೌರಮ್ಮನ ಮಗಳಿಗೆ ಮದುವೆ ಮಾಡಲು ಮುಂದಾಗಿದ್ದನು. ಆದರೆ ಇದು ಗೌರಮ್ಮಳಿಗೆ ಇಷ್ಟವಿರಲಿಲ್ಲ. ಈ ಮದುವೆಯನ್ನು ತಡೆಯುವ ಸಲುವಾಗಿ ಗೌರಮ್ಮ ತನ್ನ ಅಣ್ಣನ ಕೊಲೆಗೆ ಮುಮ್ತಾಜ್, ಮುನ್ನ, ಆರ್ಜು, ಸಾಕೀಬ್ ಎಂಬವರಿಗೆ ಸುಪಾರಿ ಕೊಟ್ಟಿದ್ದಳು.

ಗೌರಮ್ಮ ತನ್ನ ಅಣ್ಣ ಮಗಳಿಗೆ ನೋಡಿದ್ದ ವರನ ಮೇಲೆ ಸಂಶಯಗೊಂಡಿದ್ದಳು. ವರನ ಮೇಲಿನ ಅನುಮಾನದಿಂದ ಮದುವೆ ನಿಲ್ಲಿಸಲು ಪ್ಲಾನ್ ಮಾಡಿದ್ದಳು. ಹಾಗಾಗಿ 3 ಲಕ್ಷ ರೂ. ಸುಪಾರಿ ಕೊಟ್ಟು ರಾಜಶೇಖರ್‍ನನ್ನು ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಕೊಲೆ ಮಾಡಿಸಿದ್ದಳು.

ಮಗಳ ಮದುವೆ ತಡೆಯಲು ಅಣ್ಣನನ್ನೇ ಕೊಂದ ತಂಗಿ: ನಾಲ್ವರು ಆರೋಪಿಗಳ ಬಂಧನ
Bangalore,women kills,her brother,4 arrested,kengeri