ಸಿಎಂ ಅಭ್ಯರ್ಥಿ ವಿಚಾರ: ಸಿದ್ಧರಾಮಯ್ಯ ಪರ ಮತ್ತೊಬ್ಬ ಶಾಸಕ ಬ್ಯಾಟಿಂಗ್.

Promotion

ಬೆಂಗಳೂರು,ಜೂನ್,23,2021(www.justkannada.in): ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಬಗ್ಗೆ ಶಾಸಕರು ಹೇಳಿಕೆ ನೀಡುತ್ತಿರುವ ಹಿನ್ನೆಲೆ ಶೀತಲ ಸಮರವೇರ್ಪಟ್ಟಿದ್ದು, ಈ ವಿಚಾರದ ಬಗ್ಗೆ ಹೈಕಮಾಂಡ್ ಜತೆ ಕೆಪಿಸಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.jk

ಈ ಮಧ್ಯೆ  ಸಿದ್ಧರಾಮಯ್ಯ ಭಾವಿ ಸಿಎಂ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ ನಂತರ ಶಾಸಕರಾದ ರಾಘವೇಂದ್ರ ಹಿಟ್ನಾಳ್, ಭೀಮಾನಾಯ್ಕ್, ಕಂಪ್ಲಿ ಶಾಸಕ ಗಣೇಶ್ ಅವರು ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಹೇಳಿಕೆ ನೀಡಿದ್ದರು.

ಇದೀಗ ಸಿದ್ಧರಾಮಯ್ಯ ಪರ ಮತ್ತೊಬ್ಬ ಶಾಸಕ ಬ್ಯಾಟ್ ಬೀಸಿದ್ದಾರೆ. ಸಿದ್ಧರಾಮಯ್ಯ ಮುಂದಿನ ಸಿಎಂ ಎಂದು ಹರಿಹರ ಶಾಸಕ ರಾಮಪ್ಪ ಹೇಳಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬುದು ಜನರ ಅಭಿಪ್ರಾಯ. ಕಾಂಗ್ರೆಸ್ ಶಾಸಕರ ಅಭಿಪ್ರಾಯವೂ ಹೌದು.

lockdown-government –responsibility- Opposition leader -Siddaramaiah
siddaramaih#profile..

ಡಿ.ಕೆ ಶಿವಕುಮಾರ್ ಗೆ ವಯಸ್ಸಿದೆ. ಮುಂದೆ ಸಿಎಂ ಆಗಬಹುದು. ಹೀಗಾಗಿ 2023ಕ್ಕೆ ಸಿದ್ಧರಾಮಯ್ಯ ಅವರೇ ಸಿಎಂ ಆಗಬೇಕು ಎಂದು ಶಾಸಕ ರಾಮಪ್ಪ ತಿಳಿಸಿದ್ದಾರೆ.

Key words: CM -Candidate –Issues- Another- MLA – Siddaramaiah’s- batting.