Tuesday, August 4, 2026

BDA Apartments

Home Front Page ಸಿಎಂ ಕುರ್ಚಿಗೆ ಟವಲ್ ಹಾಕುವ ಕೆಲಸ ಆರಂಭವಾಗಿದೆ- ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್ ಕುಮಾರ್ ಕಟೀಲ್.

ಸಿಎಂ ಕುರ್ಚಿಗೆ ಟವಲ್ ಹಾಕುವ ಕೆಲಸ ಆರಂಭವಾಗಿದೆ- ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್ ಕುಮಾರ್ ಕಟೀಲ್.

ಕೊಪ್ಪಳ,ಜೂನ್,23,2021(www.justkannada.in): ಗೊಂದಲ ಇರುವುದು ಬಿಜೆಪಿಯಲ್ಲಲ್ಲ, ಕಾಂಗ್ರೆಸ್ ನಲ್ಲಿ. ಸಿಎಂ ಅಭ್ಯರ್ಥಿ ಬಗ್ಗೆ ಈಗಾಗಲೇ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಜಗಳ ಉಂಟಾಗಿದೆ.  ಸಿಎಂ ಕುರ್ಚಿಗೆ ಟವಲ್ ಹಾಕುವ ಕೆಲಸ ಆರಂಭವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.jk

ಕೊಪ್ಪಳದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್,  ರಾಜ್ಯ ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ. ಸ್ವಲ್ಪ ಸಮಸ್ಯೆ ಇತ್ತು. ಅರುಣ್ ಸಿಂಗ್ ಸರಿ ಮಾಡಿದ್ದಾರೆ. ಈಗ ಗೊಂದಲ ಸಮಸ್ಯೆ ಇರುವುದು ಬಿಜೆಪಿಯಲ್ಲಿ ಅಲ್ಲ, ಕಾಂಗ್ರೆಸ್ ನಲ್ಲಿ. ಸಿಎಂ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ ನಡುವೆ ಜಗಳವಾಗುತ್ತಿದೆ. ಹಾಗೆಯೇ ಮೂಲ ವಲಸಿಗ ಎಂಬುದು ಬಿಜೆಪಿಯಲ್ಲಿಲ್ಲ. ಕಾಂಗ್ರೆಸ್ ನಲ್ಲಿದೆ. ಸಿದ್ಧರಾಮಯ್ಯ ವಲಸಿಗೆ ಎಂಬುದೇ ಈ ಜಗಳಕ್ಕೆ ಕಾರಣ ಎಂದರು.

ರಮೇಶ್ ಜಾರಕಿಹೊಳಿ ರಾಜೀನಾಮೆ ವದಂತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್, ರಮೇಶ್ ಜಾರಕಿಹೊಳಿ ನಮ್ಮ ಜತೆ ಮಾತನಾಡಿಲ್ಲ. ಆದರೆ ನಾನೇ ವೈಯಕ್ತಿಕವಾಗಿ ಅವರ ಜತೆ ಮಾತನಾಡಿದ್ದೇನೆ. ಯಾವುದೆ ಸಮಸ್ಯೆ ಇದ್ದರೂ ಪರಿಹಾರ ಮಾಡುವೆ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.

Key words: towel – CM chair –DK Shivakumar-Siddaramaiah-BJP President -Nalin Kumar Katil.