Promotion
ಬೆಂಗಳೂರು,ಜುಲೈ,22,2021(www.justkannada.in): ನಾಯಕತ್ವದ ಬದಲಾವಣೆ ಚರ್ಚೆಗೆ ಬಂದ ಬೆನ್ನಲ್ಲೆ ವಿವಿಧ ಮಠಾಧೀಶರು ಸಿಎಂ ಬಿಎಸ್ ಯಡಿಯೂರಪ್ಪ ಭೇಟಿಯಾಗಿ ಚರ್ಚೆ ನಡೆಸಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ನಡುವೆ ಇಂದು ಬೆಳಿಗ್ಗೆ ಮಾಧ್ಯಮದ ಜತೆ ಮಾತನಾಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ರಾಜೀನಾಮೆ ಸುಳಿವು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ. ಅವರ ಹೇಳಿಕೆಯನ್ನ ಸ್ವಾಗತಿಸುತ್ತೇನೆ. ಬಿಎಸ್ ವೈಗೆ ಮಠಾಧೀಶರ ಬೆಂಬಲ ಇದೆ ಅಂತಾ ಗೊತ್ತಾಗಿದೆ. ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದು ಸ್ವಾಗತಿಸುತ್ತೇನೆ. ಆದ್ರೆ ಸಿಎಂ ಬಿಎಸ್ ವೈಗೆ ಮುಜುಗರವನ್ನುಂಟು ಮಾಡಬೇಡಿ. ಬಿಎಸ್ ವೈ ಮಾತಿಗೆ ಗೌರವ ನೀಡಿ ಎಂದು ಸಲಹೆ ನೀಡಿದರು.
Key words: CM BS Yeddyurappa- resignation issue-Minister -KS Eshwarappa.