ರಾಜೀನಾಮೆ ಬಗ್ಗೆ ಸಿಎಂ ಬಿಎಸ್ ವೈ ಸುಳಿವು ಬಗ್ಗೆ ಸಚಿವ ಆರ್.ಅಶೋಕ್ ಮತ್ತು ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿದ್ದು ಹೀಗೆ..

ಬೆಂಗಳೂರು,ಜುಲೈ,22,2021(www.justkannada.in):  ಸಿಎಂ ಸ್ಥಾನಕ್ಕೆ ರಾಜೀನಾಮೆ ಬಗ್ಗೆ ಬಿಎಸ್ ಯಡಿಯೂರಪ್ಪ ಇಂದು ಮೊದಲ ಬಾರಿಗೆ ಸುಳಿವು ನೀಡಿದ್ದು, ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.jk

ಸಿಎಂ ಅವರೇ ವರಿಷ್ಠರ ಸೂಚನೆ ಪಾಲಿಸುವೆ ಎಂದು ಅವರೇ ಹೇಳಿದ್ದಾರೆ. ವರಿಷ್ಠರು ಏನು ನಿರ್ಧಾರ ಮಾಡಿದ್ದಾರೆಂದು ನಮಗೆ ಗೊತ್ತಿಲ್ಲ. ಕೇಂದ್ರದ ನಿರ್ಧಾರ ಸಿಎಂ ಮತ್ತು ವರಿಷ್ಠರಿಗೆ ಮಾತ್ರ ಗೊತ್ತು. ಪಕ್ಷದಲ್ಲಿ ನೀತಿ, ನಿಷ್ಟೆ ಪಾಲನೆ ನಮ್ಮ ಬದ್ಧತೆ  ಹೀಗಾಗಿ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ. ಎಂದು ಕಂದಾಯ ಸಚಿವ ಅಶೋಕ್ ಹೇಳಿದ್ದಾರೆ.minister- R.Ashok- hotel- re-open-good news

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಎಂ.ಟಿಬಿ ನಾಗರಾಜ್, ಸಿಎಂ ಹೇಳಿದ ಮೇಲೆ ಇನ್ನೇನಿದೆ, ನಮಗೆ ಆತಂಕವಿಲ್ಲ. ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರು ನಾವು ಸಿದ್ಧರಿದ್ದೇವೆ. ಸಚಿವ ಸ್ಥಾನ ಹೋದರೂ ಸಹ ನಮಗೆ ಆತಂಕವಿಲ್ಲ, ಪಕ್ಷದ ನಿಯಮ ಪಾಲಿಸುತ್ತೇವೆ. ನಾವು ಸಮಾನಾಂತರವಾಗಿದ್ದೇವೆ ಎಂದು ಹೇಳಿದರು.

Key words: CM BS Yeddyurappa- Hints –Resignation-Minister -R. Ashok -MTB Nagaraj