ಬಿಎಸ್ ವೈ ಅವರೇ ನಮ್ಮ ನಾಯಕರು: ಅವರು ಯುವಕರನ್ನ ನಾಚಿಸುವಂತೆ ಕೆಲಸ ಮಾಡ್ತಿದ್ದಾರೆ- ಸಚಿವ ಆರ್.ಅಶೋಕ್….

cm-bs-yeddyurappa-our-leader-minister-r-ashok
Promotion

ರಾಮನಗರ,ಜೂ,3,2020(www.justkannada.in): ರಾಜ್ಯದ ಸಿಎಂ ಆಗಿ  ಬಿಎಸ್  ಯಡಿಯೂರಪ್ಪ ಯುವಕರನ್ನ ನಾಚಿಸುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ರಾಮನಗರದಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್,  ಸಿಎಂ ಬಿಎಸ್ ಯಡಿಯೂರಪ್ಪ ಅವರೇ ನಮ್ಮ ನಾಯಕರು. ಸರ್ಕಾರ ನಡೆಸುವ ಸಂದರ್ಭದಲ್ಲಿ ಅಸಮಾಧಾನ ಸಹಜ. ಊಹಾಪೂಹಗಳು, ಗಾಳಿಸುದ್ದಿಗೆ ತಲೆ ಕೆಡಿಸಿಕೊಳ್ಳಲ್ಲ. ಬಿಎಸ್  ಯಡಿಯೂರಪ್ಪ ಯುವಕರನ್ನ ನಾಚಿಸುವಂತೆ ಕೆಲಸ ಮಾಡುತ್ತಿದ್ದಾರೆ ಬಿಎಸ್ ವೈ ಮೂರು ವರ್ಷ ಸಿಎಂ ಆಗಿರುತ್ತಾರೆ ಎಂದರು.cm-bs-yeddyurappa-our-leader-minister-r-ashok

ಜೆಡಿಎಸ್ ಜತೆ ಒಂದು ಬಾರಿ ಸರ್ಕಾರ ರಚಿಸಿದ್ದೀವಿ. ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ಜೆಡಿಎಸ್ ಸಹಕಾರ ನೀಡಿದರೇ ಸ್ವಾಗತಿಸುತ್ತೇವೆ ಎಂದು ಸಚಿವ ಆರ್. ಅಶೋಕ್ ತಿಳಿಸಿದರು. ರಾಜ್ಯಸಭೆ ಚುನಾವಣೆ ಸಂಬಂಧ ಚರ್ಚಿಸುತ್ತೇವೆ ಎಂದರು.

Key words: CM BS Yeddyurappa-our- leader- Minister -R. Ashok.