Thursday, August 13, 2026

BDA Apartments

Home Front Page  ಶಿವಮೊಗ್ಗದವರ ಜಗಳ ಒಂದು ಹೆಜ್ಜೆ ಮುಂದೆ ಹೋಗಿದೆ- ಸಚಿವ ವಿ. ಸೋಮಣ್ಣ…

 ಶಿವಮೊಗ್ಗದವರ ಜಗಳ ಒಂದು ಹೆಜ್ಜೆ ಮುಂದೆ ಹೋಗಿದೆ- ಸಚಿವ ವಿ. ಸೋಮಣ್ಣ…

ಕಲಬುರಗಿ, ಏಪ್ರಿಲ್,3,2021(www.justkannada.in):  ಶಿವಮೊಗ್ಗದವರ ಜಗಳ ಅಂದರೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ಜಗಳ ಒಂದು ಹೆಜ್ಜೆ ಮುಂದೆ ಹೋಗಿರುವುದು ಸರಿಯಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.Illegally,Sand,carrying,Truck,Seized,arrest,driver

ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ವಿಮಾನದ ಮೂಲಕ ಕಲಬುರಗಿಗೆ ಆಗಮಿಸಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ವಿ.ಸೋಮಣ್ಣ, ಈಶ್ವರಪ್ಪನವರು ಸಿಎಂ ವಿರುದ್ದ ಬಹಿರಂಗವಾಗಿ ಹೇಳಿಕೆ ಮಾಡಿರುವುದು ಸರಿಯಲ್ಲ. ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಪಕ್ಷದ ವರಿಷ್ಠರು ಎರಡು ದಿನದಲ್ಲಿ ಸರಿಪಡಿಸುತ್ತಾರೆ. ಅವರಿಬ್ಬರೂ ಒಂದೇ ಜಿಲ್ಲೆಯವರು. ಒಂದೇ ಕಡೆ ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತೇ,  ಹತ್ತಾರು ಸಲ ಈ ಹಿಂದೆ ಕುಳಿತ್ತಿದ್ದಾರೆ. ನಾಲ್ಕು ಗೋಡೆಗಳ ನಡುವೆ ಯಾವ್ಯಾವ ರೀತಿ ನಡೆದುಕೊಂಡಿದ್ದಾರೆಂಬುದು ಗೊತ್ತಿದೆ ಎಂದು ಸೋಮಣ್ಣ ಬಾಂಬ್ ಸಿಡಿಸಿದರು.CM bs yeddyurappa-minister –ks eshwarappa- Conflict-minister- V.Somanna

17ರಂದು ಚುನಾವಣೆ ಮುಗಿದ ನಂತರ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿವೆ.  ಬಹಿರಂಗವಾಗಿ ಹೇಳಿಕೆ ಬೇಡ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು. ಹಾಗೆಯೇ ಬಸವಕಲ್ಯಾಣ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಗಳ ಮನವೊಲಿಸಲಾಗುವುದು. ಕೇಳದಿದ್ದರೆ ಚುನಾವಣೆ ಹೇಗೆ ಮಾಡೋದು ಗೊತ್ತಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

Key words: CM bs yeddyurappa-minister –ks eshwarappa- Conflict-minister- V.Somanna