ಬೂಕನಕೆರೆಗೆ ತೆರಳಿದ ಸಿಎಂ ಬಿ.ಎಸ್ ಯಡಿಯೂರಪ್ಪ: ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ…

Promotion

ಮಂಡ್ಯ,ಜು,27,2019(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಇಂದು ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲ್ಲೂಕಿನ ಬೂಕನಕೆರೆಗೆ ಭೇಟಿ ನೀಡುತ್ತಿದ್ದು ಈ ಹಿನ್ನೆಲೆ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ.

ಬೂಕನಕೆರೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಸ್ವಗ್ರಾಮವಾಗಿದೆ. ಹೀಗಾಗಿ  ಬಿ.ಎಸ್ ಯಡಿಯೂರಪ್ಪ ಇಂದು ಸ್ವಗ್ರಾಮಕ್ಕೆ ತೆರಳುತ್ತಿದ್ದಾರೆ. ಈಗಾಗಲೇ ಜಕ್ಕೂರು ಏರ್ ಬೇಸ್ ನಿಂದ ಹೊರಟಿದ್ದು ಬಿಎಸ್ ವೈಗೆ ಪುತ್ರ ರಾಘವೇಂದ್ರ ಮತ್ತು ಶಾಸಕ ಬಸವರಾಜ ಬೊಮ್ಮಾಯಿ ಸಾಥ್ ನೀಡಿದ್ದಾರೆ.

ಬಿಎಸ್ ವೈ ಗ್ರಾಮದೇವತೆ ಗೋಗಾಲಮ್ಮ ಮತ್ತು ಮನೆ ದೇವರು ಕಾಪನಹಳ್ಳಿ ಗವಿಮಠ ಸಿದ್ದಲಿಂಗೇಶ್ವರನಿಗೆ ಪೂಜೆ ಸಲ್ಲಿಸಲಿದ್ದಾರೆ.

ಸಿಎಂ ಬಿಎಸ್ ವೈ ಭೇಟಿ ಹಿನ್ನೆಲೆ ಬೂಕನಕೆರೆ ಗ್ರಾಮದಲ್ಲಿ ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಎಸ್ ಪಿ, ಇಬ್ಬರು ಡಿವೈಎಸ್ಪಿ, 5 ಮಂದಿ ಇನ್ಸ್ ಪೆಕ್ಟರ್ಸ್,  15 ಮಂದಿ ಪಿಎಸ್ ಐ, 300 ಮಂದಿ ಪೇದೆಗಳು, 2 ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.

Key words: CM -BS Yeddyurappa –Bukanekare-  Police- tight security