ಮಳೆ ಹಾನಿ ಪ್ರದೇಶಕ್ಕೆ ಸಿಎಂ ಬೊಮ್ಮಾಯಿ ಭೇಟಿ, ಪರಿಶೀಲನೆ: ಮನೆ ಹಾನಿಗೊಳಗಾದವರಿಗೆ 25 ಸಾವಿರ ರೂ ಪರಿಹಾರ ಘೊಷಣೆ.

ಬೆಂಗಳೂರು,ಮೇ,18,2022(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಮನೆಗಳಿಗ್ಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಿಟಿ ರೌಂಡ್ಸ್ ಹಾಕಿ ಮಳೆಹಾನಿ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು.

ಹೊಸಕೆರೆಹಳ್ಳಿ ಬಳಿಯ ಮಳೆಹಾನಿ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಚಿವ ಆರ್.ಅಶೋಕ್. ಶಾಸಕ ಸಿಟಿ ರವಿ ಸೇರಿ ಹಲವರು ಸಾಥ್ ನೀಡಿದರು.  ಈ ವೇಳೆ ಜನರು ಸಿಎಂ ಬೊಮ್ಮಾಯಿ ಬಳಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮಳೆಯಿಂದ ಹಾನಿಯಾದ ಮನೆಗಳಿಗೆ 25 ಸಾವಿರ ರೂ. ಪರಿಹಾರ ನೀಡುತ್ತೇವೆ. ಹಾಗೆಯೇ ಮಳೆಯಿಂದ ಮೃತಪಟ್ಟ ಕಾರ್ಮಿಕರಿಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು.

ಈ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ಭಾರೀ ಮಳೆಗೆ ನಗರದ ಜನ ಜೀವನ ಅಸ್ತವ್ಯಸ್ಥವಾಗಿದೆ. ಹಲವು ಕಡೆ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ಹೀಗಾಗಿ ನೀರು ನುಗ್ಗಿರುವ ಮನೆಗಳಿಗೆ 25 ಸಾವಿರ ರೂಪಾಯಿ ಪರಿಹಾರ ನೀಡುತ್ತೇವೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಈ ಅವಾಂತರಕ್ಕೆ ಏನು ಕಾರಣ ಎಂದು ಚರ್ಚಿಸುತ್ತೇವೆ. ಎಲ್ಲ ರಾಜಕಾಲುವೆಗಳನ್ನ ಮುಕ್ತಗೊಳಿಸುವ ಕಾಮಗಾರಿ 1 ವರ್ಷದಲ್ಲಿ ಎಲ್ಲವನ್ನೂ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

Key words: CM Bommai-visit – rain -damage –area- inspection.

ENGLISH SUMMARY…..

CM Bommai visits rain-hit areas, inspects: Declares Rs. 25k compensation for families whose houses are damaged
Bengaluru, May 18, 2022 (www.justkannada.in): The rains that lashed Bengaluru city last night has created havoc in many low lying areas. As a result of heavy rains several areas were inundated in rain water. Chief Minister Basavaraj Bommai went on a city rounds today to inspect the damage caused by the rain.
The CM visited the rain-hit areas in Hosakerehalli and inspected. Minister R. Ashok, MLA C.T. Ravi and others accompanied him. The people of the area expressed their ire and helplessness during his visit. The Chief Minister declared a sum of Rs. 25,000 compensation to the families whose houses have been damaged in the rain, and a sum of Rs. 5 lakh for the families of the labourers who have lost their lives due to rain.
Speaking on the occasion, he said, “normal lives have been hit due to the heavy rain in the city. Rain water has entered the houses in several low-lying areas causing problems to the people. We will provide a sum of Rs. 25,000 compensation to such families,” he said.
Further he said, “I will discuss with the officials concerned to find out what is the reason behind this problem. We have vowed to set right such civic problems by clearing all the storm water drains in the city within one year.”
Keywords: CM Basavaraj Bommai/ heavy rain/ Bengaluru/ low-lying areas/ visit/ inspects