ಸಿದ್ಧರಾಮಯ್ಯ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ, ಸುಳ್ಳು- ಸಿಎಂ ಬಸವರಾಜ ಬೊಮ್ಮಾಯಿ.

Promotion

ಮೈಸೂರು,ಜನವರಿ,26,2022(www.justkannada.in): ಸಿದ್ಧರಾಮಯ್ಯ ನಿನ್ನೆ ಕಾಂಗ್ರೆಸ್ ಗೆ ಬಹಳಷ್ಟು ಶಾಸಕರು ಬರ್ತಾರೆ ಅಂದಿದ್ದರು. ಆದ್ರೆ ಇಂದು ಚುನಾವಣೆ ಸಂದರ್ಭದಲ್ಲಿ ಬರ್ತಾರೆ ಎಂದಿದ್ದಾರೆ  ಇದರಿಂದ ಸಿದ್ಧರಾಮಯ್ಯ ಹೇಳಿಕೆ ಸುಳ್ಳು ಅಂತಾ ಗೊತ್ತಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆಂಬ ಹೇಳಿಕೆ ಕುರಿತು ಮಾಧ್ಯಮಗಳಿಗೆ  ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ,  ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆಂದು ಡಿಕೆಶಿ ಹೇಳುತ್ತಾರೆ. ಸಿದ್ಧರಾಮಯ್ಯ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎನ್ನುತ್ತಾರೆ. ಹೀಗಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಆಂತರಿಕ ಸಂಘರ್ಷವಿದೆ. ಇಬ್ಬರ ನಡುವೆ ಆಂತರಿಕವಾಗಿ ಸಂಘರ್ಷವಿದೆ.  ಸಿದ್ಧರಾಮಯ್ಯ  ಹೇಳಿಕೆಯಲ್ಲಿ ಸತ್ಯಾಂಶವಿಲ್ಲ ಎಂದು ತಿಳಿಸಿದರು.

ಗಣರಾಜ್ಯೋತ್ಸವ ದಿನದಂದು  ಗ್ರಾಮ ಒನ್ ಗೆ ಚಾಲನೆ ನೀಡಿದ್ದೇವೆ. ನಮ್ಮೆಲ್ಲರ ಕರ್ತವ್ಯ ನೆನಪು ಮಾಡಿಕೊಂಡ ದಿನವಿದು  ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಸರ್ಕಾರವಿದು. ಹೀಗಾಗಿ ಗ್ರಾಮ ಒನ್ ಜಾರಿಗೆ ತಂದಿದ್ದೇವೆ.  ಗ್ರಾಪಂಗಳಲ್ಲೇ ಸೇವೆ ಒದಗಿಸಲು ಇದನ್ನ ಜಾರಿಗೆ ತಂದಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: cm-basavaraj bommai-siddaramaiah