40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ನಾವು ಮುಕ್ತ: ದಾಖಲೆ ಕೊಟ್ಟರೇ ನಾಳೆಯೇ ತನಿಖೆ- ಸಿಎಂ ಬಸವರಾಜ ಬೊಮ್ಮಾಯಿ.

Promotion

ಬೆಂಗಳೂರು,ಸೆಪ್ಟಂಬರ್,23,2022(www.justkannada.in) 40 ಪರ್ಸೆಂಟ್   ಕಮಿಷನ್ ಆರೋಪದ ವಿಚಾರಕ್ಕೆ ನಾವು ಮುಕ್ತರಿದ್ದೇವೆ. ಈಗಲೂ ದೂರು ಮತ್ತು ದಾಖಲೆ ನೀಡಿದ್ರೆ  ನಾಳೆಯೇ ತನಿಖೆಗೆ ಮಾಡಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪೇ ಸಿಎಂ ಪೋಸ್ಟರ್ ಅಭಿಯಾನ ವಿಚಾರ ಕಾಂಗ್ರೆಸ್ ನವರು ಯಾವ ಕ್ಯಾಂಪೇನ್ ಬೇಕಾದರೂ ಮಾಡಲಿ ಕೊನೆಗೆ ಸತ್ಯಕ್ಕೆ ಜಯ ಸಿಗುತ್ತೆ ಎಂದರು.

40 ಕಮಿಷನ್ ಆರೋಪದ ವಿಚಾರದಕ್ಕೆ ನಾವು ಮುಕ್ತರಿದ್ದೇವೆ.  ದೂರು   ಕೊಟ್ಟರೇ ತನಿಖೆ ನಡೆಸಲು ಸಿದ್ಧ. ನ್ಯಾಯಾಂಗ ತನಿಖೆಯಾಖೆ  ಲೋಕಾಯುಕ್ತವೇ ಇದೆಯಲ್ಲ. ಲೋಕಾಯುಕ್ತ ತನಿಖೆಯನ್ನ ಮಾಡಿಸುತ್ತೇವೆ ಎಂದರು.

ಕಾಂಗ್ರೆಸ್ ನಾಯಕರು ಬರೀ ರಾಜಕೀಯ ಪ್ರೇರಿತ ಆರೋಪ ಮಾಡುತ್ತಾರೆ. ಈ ಬಗ್ಗೆ ಸದನದಲ್ಲಿ ಚರ್ಚೆಗೆ ನಾವು ಸಿದ್ಧರಿದ್ದವು.  ಆದರೆ ಅವರೇ ದಾಖಲೆ ಕೊಡಲಿಲ್ಲ. ಪುರಾವೆ ಇಲ್ಲದೆ ಮಾತನಾಡುವುದು ಬಹಳ ದಿನ ಉಳಿಯಲ್ಲ ಎಂದು ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು.

Key words: CM- Basavaraj Bommai-congress-former CM-siddaramaiah