ಕೆರೆಗೆ ಹಾರಿ ನಗರ ಶಸ್ತ್ರಾಸ್ತ್ರ ಮೀಸಲು ಪಡೆ ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆ.

Promotion

ಮೈಸೂರು,ಜೂನ್,12,2021(www.justkannada.in): ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವರುಣ ಕೆರೆಗೆ ಹಾರಿ ನಗರ ಶಸ್ತ್ರಾಸ್ತ್ರ ಮೀಸಲು ಪಡೆ(CAR) ಪೊಲೀಸ್ ಕಾನ್ಸ್‌ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.jk

ಪೊಲೀಸ್ ಕಾನ್ಸ್ ಟೇಬಲ್ ಮೋಹನ್ (APC 197) ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದವರು. ಮೃತ ಮೋಹನ್, 2008 ನೇ ಬ್ಯಾಚ್ ನ ಸಿಬ್ಬಂದಿ. ಸದ್ಯ ಅವರು ಬಾಂಬ್ ಸ್ವಾಡ್ ವಿಭಾಗದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ. ಆದರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

Key words: City Arms Reserve Force Police -Constable -Suicide -mysore