ದೆಹಲಿಯಲ್ಲಿ ಮತ್ತೆ ಭುಗಿಲೆದ್ಧ ಪೌರತ್ವ ಹಿಂಸಾಚಾರ: ಕಲ್ಲು ತೂರಾಟ: ಗಲಭೆಕೋರರನ್ನ ಚದುರಿಸಲು ಪೊಲೀಸರ ಹರಸಾಹಸ…

Promotion

ನವದೆಹಲಿ,ಫೆ,25,2020(www.justkannada.in):  ರಾಜ್ಯರಾಜಧಾನಿ ನವದೆಹಲಿಯಲ್ಲಿ ಪೌರತ್ವ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು ದುಷ್ಕರ್ಮಿಗಳು ಮಾಸ್ಕ್ ಧರಿಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ.

ಪೌರತ್ವ ತಿದ್ದುಪಡಿ ಕುರಿತು ಪರ ಮತ್ತು ವಿರೋಧ ಗುಂಪುಗಳ ನಡುವೆ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಈಗಾಗಲೇ 7 ಜನರು ಸಾವನ್ನಪ್ಪಿದ್ದಾರೆ. ಒಬ್ಬ ಕಾನ್ಸ್​ಟೇಬಲ್​ ಸೇರಿದಂತೆ 7 ಮಂದಿ ಹಿಂಸಾಚಾರಕ್ಕೆ ಈ ವರೆಗೂ ಬಲಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ನಡುವೆ ಇದೀಗ ಮತ್ತೆ ದೆಹಲಿಯಲ್ಲಿ ಪೌರತ್ವದ ಹಿಂಸಾಚಾರ ಭುಗಿಲೆದ್ದಿದೆ. ಕರ್ಧಂಪುರಿ ಮತ್ತು ಭಜನ್ ಪುರದಲ್ಲಿ ಹಿಂಸಾಚಾರ ನಡೆದಿದ್ದು, ಭಜನ್ ಪುರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ,  ಈ ವೇಳೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಲಾಗಿದ್ದು ಗಲಭೆಕೋರರ ಗುಂಪು ಚದುರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಕಲ್ಲು ತೂರಾಟದ ವೇಳೆ ವ್ಯಕ್ತಿಯೊಬ್ಬ ಫೈರಿಂಗ್ ನಡೆಸಿದ್ದಾನೆ ಎನ್ನಲಾಗಿದೆ.

ಹಿಂಸಾಚಾರ ಹಿನ್ನೆಲೆ ದೆಹಲಿಯ ಕೆಲವು ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಗಲಭೆಕೋರರ ಮೇಲೆ ಡ್ರೋಣ್ ಕಣ್ಗಾವಲು ಇರಿಸಲಾಗಿದ್ದು 35 ಪ್ಯಾರ ಮಿಲಿಟರಿ ತುಕಡಿ ನಿಯೋಜಿಸಲಾಗಿದೆ. ನಿನ್ನೆಯಿಂದ ಘಟನೆಯಲ್ಲಿ 75ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: citizenship -violence – Delhi-Stone- Police