ಟಾಟಾ ಏಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ: ಮೂವರು ಮಹಿಳೆಯರು ಸಾವು….

ಶಿವಮೊಗ್ಗ,ಫೆ,25,2020(www.justkannada.in): ಟಾಟಾ ಏಸ್ ವಾಹನ ಹಾಗೂ ಖಾಸಗಿ ಬಸ್  ನಡುವೆ ಭಿಕರ ಅಪಘಾತ ಸಂಭವಿಸಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಬಳಿ ಈ ಘಟನೆ  ನಡೆದಿದೆ. ಟಾಟಾ ಏಸ್ ವಾಹನದಲ್ಲಿದ್ದ ಚಂದ್ರಕಲಾ (40), ಲಕ್ಷ್ಮೀ (40) ಹಾಗೂ ರೇಖಾ(45) ಮೃತಪಟ್ಟ ಮಹಿಳೆಯರು ಎಂದು ಗುರುತಿಸಲಾಗಿದೆ. ಮೃತ ಮಹಿಳೆಯರು ಜಯನಗರ ನಿವಾಸಿಗಳು ಎನ್ನಲಾಗಿದೆ.

ಈ ನಡುವೆ  ಮಹಿಳೆಯರು ಟಾಟಾ ಏಸ್ ನಲ್ಲಿ ಶಿಕಾರಿಪುರದಿಂದ ಕೊಪ್ಪದ ಕೆರೆಗೆ ಪೂಜೆಗೆಂದು ತೆರಳುತ್ತಿದ್ದರು ಈ ವೇಳೆ ದುರ್ಘಟನೆ ಸಂಭವಿಸಿದೆ. ಈ ಕುರಿತು ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Accident -between -Tata Ace – private bus-death – three women.